ಅಜ್ಜ-ಅಜ್ಜಿಯರ ದಿನಾಚರಣೆ

gparents day
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಎಲ್ಲೆಡೆ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಿದರೆ, ಹುಬ್ಬಳ್ಳಿ ಕೇಶ್ವಾಪುರದ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿನೂತನವಾಗಿ ಅಜ್ಜ-ಅಜ್ಜಿಯರ ದಿನ ಆಚರಿಸಲಾಯಿತು.

ಅತಿಥಿಗಳಾಗಿದ್ದ ನಗರದ ಹಿರಿಯ ವರ್ತಕ ಜಿ.ಎಂ. ಚಿಕ್ಕಮಠ, ಭಾರತೀಯ ನೌಕಾ ಸೇನೆಯ ನಿವೃತ್ತ ಅಧಿಕಾರಿ ವಸಂತ ಕುಲಕರ್ಣಿ ಹಾಗೂ 2021ರ ಮಿಸೆಸ್ ಇಂಡಿಯಾ ಪ್ರವೀಣಾ ಸಲೇಚಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲೆಯ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಮಾತನಾಡಿ, ಅಜ್ಜ ಅಜ್ಜಿಯರು ಕುಟುಂಬದ ಕಣ್ಣುಗಳಿದ್ದಂತೆ. ಅವರ ಆಶೀರ್ವಾದ ಸದಾ ಮನೆಯ ಇತರ ಸದಸ್ಯರ ಮೇಲೆ ಇರಬೇಕು. ವೃದ್ಧಾಶ್ರಮಗಳ ಸಂಖ್ಯೆ ಕಡಿಮೆ ಆಗಬೇಕು. ಮಕ್ಕಳಲ್ಲಿ ಹಿರಿಯರ ಮೇಲೆ ಪ್ರೀತಿ, ವಿಶ್ವಾಸ, ನಂಬಿಕೆ, ಗೌರವ ಇರಬೇಕು ಎಂದು ಹೇಳಿದರು.

ಅಜ್ಜ, ಅಜ್ಜಿಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇತ್ತೀಚೆಗೆ ಅಗಲಿದ ಹಿರಿಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಅಜ್ಜ, ಅಜ್ಜಿಯರನ್ನು ಸಂತೋಷ ಪಡಿಸಲು ಕಿರು ನಾಟಕ, ನೃತ್ಯಗಳನ್ನು ಪ್ರದರ್ಶಿಸಿದರು.

ಶಾಲೆಯ ಅಧ್ಯಕ್ಷ ಮಹಾವೀರ ಕುಂದೂರ, ಕಾರ್ಯದರ್ಶಿ ಸುಧೀರ ವೋರಾ, ಖಜಾಂಚಿ ಉಜ್ವಲ್ ಸಿಂಘಿ, ನಿರ್ದೇಶಕಿ ಸ್ವಪ್ನಾ ವೋರಾ, ಪ್ರಾಚಾರ್ಯು ನೈನಾ ಪಿ.ಸಿ., ಇತರರು ಇದ್ದರು. ವಿದ್ಯಾರ್ಥಿನಿ ಆರೋಹಿ ಅಂಕಲೀಕರ ಸ್ವಾಗತಿಸಿದಳು. ವಿದ್ಯಾರ್ಥಿಗಳಾದ ಆನ್ವಿ ಕುಲಕರ್ಣಿ ಮತ್ತು ನೀಲ್ ಕೆಂಬಾವಿ ನಿರೂಪಿಸಿದರು. ಶಿಕ್ಷಕಿ ರಜನಿ ಗಲಗಲಿ ಹಾಗೂ ವಿನೋದ. ಎಸ್ ಪರಿಚಯಿಸಿದರು. ವಿದ್ಯಾರ್ಥಿ ನಿಕುಂಜ ನಾಯ್ಕ ವಂದಿಸಿದನು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net