ಇಸ್ಕಾನ್‌ನಲ್ಲಿ ಅದ್ದೂರಿ ಕೃಷ್ಣಜನ್ಮಾಸ್ಟಮಿ ಉತ್ಸವ ನಾಡಿದ್ದು

ISKCON
Published on

ಕಾರವಾರ:ನಗರದ ಹಬ್ಬುವಾಡದ ಇಸ್ಕಾನ್ ಜಗನ್ನಾಥ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಪ್ರಾರಂಭವಾಗಿದ್ದು, ಸೆ. 7 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಮಂದಿರದ ಮುಖ್ಯಸ್ಥ ಗೋವಿಂದ ದತ್ತ ದಾಸ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಬ್ಬುವಾಡದಲ್ಲಿ ಆಯೋಜಿಸುತ್ತ ಬಂದಿದೆ.

ಸೆ. 4ರಿಂದಲೇ ವಿವಿಧ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ಪ್ರತಿ ದಿನ ಸಾಯಂಕಾಲ 6.30 ರಿಂದ ಆರತಿ, ಕೀರ್ತನೆ, ಪುಣೆಯ ಸುಂದರ ಶ್ಯಾಮ ಪ್ರಭು ಅವರಿಂದ ಕೃಷ್ಣ ಕಥೆ, 8.45 ಕ್ಕೆ ಮಹಾ ಪ್ರಸಾದ ವಿತರಣೆ ಇದೆ.
ಸೆ.7 ರಂದು ಇಡೀ ದಿನ ಕಾರ್ಯಕ್ರಮಗಳು ಜರುಗಲಿವೆ. ಬೆಳಗ್ಗೆ 5 ಗಂಟೆಯಿಂದ ಮಂಗಳ ಆರತಿ, ತುಳಸಿ ಆರತಿ, ಜಪ, ದರ್ಶನ ಆರತಿ, ಗುರು ಪೂಜೆಗಳು ನಡೆಯಲಿವೆ. ಬೆಳಗ್ಗೆ 8 ಗಂಟೆಯಿಂದ ಕೃಷ್ಣ ಕಥೆ ಜರುಗಲಿದೆ.

ಸಾಯಂಕಾಲ 5 ಗಂಟೆಗೆ ಕೀರ್ತನೆ, 5.30 ರಿಂದ ಅಭಿಷೇಕ, 9 ರಿಂದ ನಾಟ್ಯ ಲೀಲೆ, 10 ಗಂಟೆಯಿಂದ ಕೃಷ್ಣ ಕಥೆ ನಡೆಯಲಿದೆ. ರಾತ್ರಿ 12 ಗಂಟೆಗೆ ಸರಿಯಾಗಿ ಮಹಾ ಆರತಿ, ಕೀರ್ತನೆ ನಂತರ ಪ್ರಸಾದ ವಿತರಣೆ ನಡೆಯಲಿದೆ.

ಇದನ್ನೂ ಓದಿ:ನಲ್ಲಿಯಲ್ಲಿ ಬರುತ್ತಿದೆ ರಾಡಿ ನೀರು!
ಸೆ. 8 ರಂದು ಇಸ್ಕಾನ್ ಸಂಸ್ಥಾಪಕ ಪ್ರಭುಪಾದರ ಆವಿರ್ಭಾವ ದಿನ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10 ರಿಂದ ಕೀರ್ತನೆ, ಅಭಿಷೇಕ, ಗುಣ ಗೌರವ, ಪುಷ್ಪಾಂಜಲಿ, ಆರತಿ ನಡೆಯಲಿದ್ದು, ಎಲ್ಲರಿಗೂ ಮಹಾ ಪ್ರಸಾದ ವ್ಯವಸ್ಥೆ ಇದೆ ಎಂದು ತಿಳಿಸಿದರು ದಾಮೋದರ ಲೀಲಾ ದಾಸ, ನಿತಾಯ ಪದ್ಮದಾಸ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net