ಕರುನಾಡ ಸಂಭ್ರಮಕ್ಕೆ ಅದ್ದೂರಿ ತೆರೆ: ನಟ ಶ್ರೀನಾಥ್​ಗೆ ಕನ್ನಡ ಕಲಾಭೂಷಣ ಪ್ರಶಸ್ತಿ ಪ್ರದಾನ

karu
Published on

ಬೆಂಗಳೂರು: ಗೆಲುವು ಕನ್ನಡ ಗೆಳೆಯರ ಸಮಿತಿ ಹಾಗೂ ಜಿಕೆಜಿಎಸ್​ ಚಾರಿಟಬಲ್​ ಟ್ರಸ್ಟ್​, "ವಿಜಯವಾಣಿ' ಸಹಯೋಗದೊಂದಿಗೆ ಬೆಂಗ

ಳೂರಿನ ಶ್ರೀನಿವಾಸನಗರದ ಶಂಕರ್​ನಾಗ್​ ವೃತ್ತ ಸಮೀಪದ ಕೆಂಪೇಗೌಡ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ "ಕರುನಾಡ ಸಂಭ್ರಮ' ಭಾನುವಾರ ಅದ್ದೂರಿಯಾಗಿ ಸಮಾಪ್ತಿಗೊಂಡಿದೆ.

ಹಿರಿಯ ನಟ ಶ್ರೀನಾಥ್​ ಅವರಿಗೆ ಮಾಜಿ ಸಂಸದ ಡಿ.ಕೆ.ಸುರೇಶ್​ "ಕನ್ನಡ ಕಲಾಭೂಷಣ' ಪ್ರಶಸ್ತಿ ಪ್ರದಾನ ಮಾಡಿದರು. ನಂತರ,ಗಾಯಕ ರಘು ದೀಕ್ಷಿತ್​​ ತಂಡದಿಂದ ಸಂಗೀತ ಸಂಜೆ, ಕಿರುತರೆ ನಟ-ನಟಿಯರಿಂದ ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ವಾರಾಂತ್ಯ ಹಿನ್ನೆಲೆಯಲ್ಲಿ ಸಾಕಷ್ಟು ಜನರು ಆಗಮಿಸಿದ್ದರು. ಕಾರ್ಯಕ್ರಮದ ಮೊದಲ ದಿನದಂದು ಶಾಲಾ ಮಕ್ಕಳಿಂದ ವಿವಿಧ ಸಾಂಸತಿಕ ಕಾರ್ಯಕ್ರಮಗಳು ನಡೆದವು. ಚಿತ್ರಗಿತೆಗಳಿಗೆ ಹಲವು ಮಕ್ಕಳು ನೃತ್ಯ ಪ್ರಚುರಪಡಿಸಿ ಸಾವಿರಾರು ಜನರಿಗೆ ಮನರಂಜನೆ ಒದಗಿಸಿದ್ದರು. ಪಾಲಕರು ತಮ್ಮ ಮಕ್ಕಳ ನೃತ್ಯ ಪ್ರದರ್ಶವನ್ನು ನೋಡಿ ಖುಷಿಪಟ್ಟಿದ್ದರು.

2ನೇ ಮತ್ತು 3ನೇ ದಿನದಂದು "ರಾವೇಂದ್ರ ವೈಭವೋತ್ಸವ', "ಶ್ರೀನಿವಾಸ ಕಲ್ಯಾಣೋತ್ಸವ'ವನ್ನು ಸಾವಿರಾರು ಸಭಿಕರು ಕಣ್ತುಂಬಿಸಿಕೊಂಡಿದ್ದರು .ಶನಿವಾರ ಹಿರಿಯ ಗಾಯಕಿ ಕೆ.ಎಸ್​.ಚಿತ್ರಾ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಇದೇ ವೇಳೆ ನಟಿ ಲಕ್ಷ್ಮೀದೇವಮ್ಮಗೆ"ಕರುನಾಡ ಸಂಭ್ರಮ' ಬಿರುದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ನಟರಾದ ಶ್ರೀನಗರ ಕಿಟ್ಟಿ, ಡಾಲಿ ಧನಂಜಯ, ದುನಿಯಾ ವಿಜಯ್​,ಟ್ರಸ್ಟ್​ ಗೌರವಾಧ್ಯಕ್ಷ ಡಿ. ಶಿವಲಿಂಗಯ್ಯ, ಅಧ್ಯಕ್ಷ ಡಿ.ಕೃಷ್ಣೇಗೌಡ, ಉಪಾಧ್ಯಕ್ಷ ಡಿ.ಎನ್​.ರಮೇಶ್​, ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಪ್ರಶಾಂತ್​, ಮುಖ್ಯ ಕಾರ್ಯದರ್ಶಿ ವಿ.ಮಂಜುನಾಥ್​, ನಟ ತಬಲಾನಾಣಿ ಮತ್ತಿತರರಿದ್ದರು.

ಗೆಲುವು ಕನ್ನಡ ಗೆಳೆಯರ ಸಮಿತಿಯಿಂದ ಹಲವು ವರ್ಷಗಳಿಂದ ಯಶಸ್ವಿಯಾಗಿ ಕರುನಾಡ ಸಂಭ್ರಮ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಪ್ರತಿ ವರ್ಷವೂ ತಪ್ಪದೆ ಭಾಗಿಯಾಗುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡದಂತಹ ಕಾರ್ಯಕ್ರಮಗಳನ್ನು ನಡೆಸಲು ಸಂಘಕ್ಕೆ ಇನ್ನಷ್ಟು ಶಕ್ತಿ ಸಿಗಲಿ.ನಮ್ಮ ಪ್ರೋತ್ಸಾಹ ಸಂಘಕ್ಕೆ ಸದಾ ಇರಲಿದೆ.

| ಡಿ.ಕೆ.ಸುರೇಶ್​. ಮಾಜಿ ಸಂಸದ.

ಎಲ್ಲರ ಸಹಕಾರದಿಂದ ಕರುನಾಡ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ಮುಗಿದಿದೆ. ಶ್ರೀನಿವಾಸನಗರ ಸುತ್ತಮುತ್ತ ಬಡಾವಣೆಯ ಸಾವಿರಾರು ನಿವಾಸಿಗಳು ಕಾರ್ಯಕ್ರಮವನ್ನು ಆನಂದಿಸಿದ್ದಾರೆ. ಪ್ರತಿಭಾವಂತ ಕಿರುತರೆ ನಟ- ನಟಿಯರಿಗೆ ವೇದಿಕೆ ಕಲ್ಪಿಸಲಾಗಿತ್ತು. ಮುಂದಿನ ವರ್ಷದಿಂದ ಇನ್ನಷ್ಟು ವರ್ಣರಂಜಿತವಾಗಿ ನಡೆಸಲಾಗುವುದು.

| ಕೃಷ್ಣೇಗೌಡ. ಗೆಲುವು ಕನ್ನಡ ಗೆಳೆಯರ ಸಮಿತಿ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net