ಸುಗ್ಗೇನಹಳ್ಳಿ ಗ್ರಾಪಂ ಗದ್ದುಗೆ ಅಲಂಕರಿಸಿದ ಎ.ಕೆ.ಲೋಕೇಶ್

kmp
ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಪಂ ಅಧ್ಯಕ್ಷ ಎ.ಕೆ.ಲೋಕೇಶ್, ಉಪಾಧ್ಯಕ್ಷೆಯಾಗಿ ಎನ್.ತಿಮ್ಮಕ್ಕ ಆಯ್ಕೆಯಾದರು.ಪ್ರಮುಖರಾದ ಮೋದಿಪಲ್ಲೆ ರಾಮಚಂದ್ರ, ಕೆ.ಜಯರಾಮ, ಟಿ.ಪೋಲಪ್ಪ, ಗೋನಾಳ್ ಹೂವಣ್ಣ, ಪಿ.ಪಾರ್ವತಮ್ಮ, ಇತರರಿದ್ದರು.
Published on

ಕಂಪ್ಲಿ: ತಾಲೂಕಿನ ಸುಗ್ಗೇನಹಳ್ಳಿ ಗ್ರಾಪಂ ಅಧ್ಯಕ್ಷ ಎ.ಕೆ.ಲೋಕೇಶ್, ಉಪಾಧ್ಯಕ್ಷೆಯಾಗಿ ಎನ್.ತಿಮ್ಮಕ ಶುಕ್ರವಾರ ಆಯ್ಕೆಯಾದರು.


ಸುಗ್ಗೇನಹಳ್ಳಿ ಗ್ರಾಪಂಯು ಒಟ್ಟು 19 ಸ್ಥಾನ ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಕ್ಷ್ಮೀದೇವಿ 6, ಎ.ಕೆ.ಲೋಕೇಶ್ 12 ಮತ ಪಡೆದು ಅಧ್ಯಕ್ಷರಾಗಿ ವಿಜೇತರಾಗಿದ್ದು, ಒಂದು ಮತ ತಿರಸ್ಕೃತವಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಉಮಾದೇವಿ 7, ಎನ್.ತಿಮ್ಮಕ್ಕ 12 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ತಾಪಂ ಇಒ ಆರ್.ಕೆ.ಶ್ರೀಕುಮಾರ್ ಘೋಷಿಸಿದರು.


ಪಿಡಿಒ ಹನುಮಂತಪ್ಪ, ಗ್ರಾಪಂ ಸದಸ್ಯರಾದ ಕೆ.ಶಿವಕೃಷ್ಣ, ಖುರ್ಷಿದ್‌ಬೇಗಮ್, ಎನ್.ತಿಪ್ಪಯ್ಯ, ಪಿ.ನೂರ್‌ಜಹಾನ್, ಎಚ್.ವರಲಕ್ಷ್ಮೀ, ವಿ.ರಾಮಾಂಜಿನೇಯಲು, ಎಂ.ಮಂಜುನಾಥ, ಬಿ.ಧನುಂಜಯ್ಯ, ಪಾರ್ವತಮ್ಮ, ರತ್ನಮ್ಮ, ರಾಮಸುಬ್ಬಯ್ಯ, ಎಸ್.ರಾಮಲಿಸ್ವಾಮಿ, ಪಿ.ಸುಭಾನ್‌ಸಾಬ್, ಶಂಕ್ರಮ್ಮ, ಸಿ.ದೇವಮ್ಮ, ಬಿಜೆಪಿ ಮುಖಂಡರಾದ ಮೋದಿಪಲ್ಲೆ ರಾಮಚಂದ್ರ, ಕೆ.ಜಯರಾಮ, ಟಿ.ಪೋಲಪ್ಪ, ಗೋನಾಳ್ ಹೂವಣ್ಣ, ಪಿ.ಪಾರ್ವತಮ್ಮ, ಸುಗ್ಗೇನಹಳ್ಳಿ ರಾಮಾಂಜಿನಿ, ಸುಗ್ಗೇನಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net