

ಮೂಡುಬಿದಿರೆ: ವಾಲ್ಪಾಡಿ ಗ್ರಾಮೋತ್ಸವ ಸಮಿತಿ ಹಾಗೂ ಮಾಡದಂಗಡಿ ಶಾಲಾ ಎಸ್ಡಿಎಂಸಿ ವತಿಯಿಂದ ಗ್ರಾಮೋತ್ಸವ, ಐದನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ವಾಲ್ಪಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ., ತಾಪಂ ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ, ಗ್ರಾಪಂ ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಶ್ರೀಧರ ಬಂಗೇರ, ಸಮಾಜ ಸೇವಕ ಶಶಿಧರ ದೇವಾಡಿಗ, ಮುಖ್ಯ ಶಿಕ್ಷಕಿ ವಾಣಿಶ್ರೀ ಉಪಸ್ಥಿತರಿದ್ದರು. ಐದನೇ ತರಗತಿ ವಿದ್ಯಾರ್ಥಿಗಳಾದ ಗೌಸುಲ್ ಅಹ್ಲಮ್, ಸುಹಾನ, ರಶ್ಮಿ, ಸೃಜನ್, ಧೀರಕ್ಷ, ಸಂಗೀತಾ ಹಾಗೂ ಶರಣ್ ಅವರನ್ನು ಬೀಳ್ಕೊಡಲಾಯಿತು.
ಮುಖ್ಯಮಂತ್ರಿ ಪದಕ ಪುರಸ್ಕೃತ ಪೊಲೀಸ್ ಸಂದೇಶ್ ಪಿ.ಜಿ., ಸಮಾಜ ಸೇವೆಗಾಗಿ ರುಕ್ಕಯ್ಯ ಪೂಜಾರಿ, ನಿವೃತ್ತ ಶಿಕ್ಷಕಿ ಜೆಸಿಂತ ಡೇಸ, ಹಿರಿಯ ಕಾರು ಚಾಲಕ ರಾಮಣ್ಣ ಶೆಟ್ಟಿ, ಹಿರಿಯ ರಿಕ್ಷಾ ಚಾಲಕ ಎಸ್.ಎ.ಇಬ್ರಾಹಿಂ, ಮುತ್ತಯ್ಯ ನಲ್ಕೆ(ದೈವಾರಾಧನೆ), ಸುಬ್ರಾಯ ಭಟ್(ಹೋಟೆಲ್ ಉದ್ಯಮ), ರಾಘು ಪೂಜಾರಿ(ಬೀಡಿ ಉದ್ಯಮ), ಪ್ರಶಾಂತ್ ಜೈನ್(ಪಾಕ ತಜ್ಞ), ಬಾಬು ಜೋಗೊಟ್ಟು(ಧಾರ್ಮಿಕ), ಅಚ್ಚಪ್ಪ ಟೈಲರ್(ಟೈಲರಿಂಗ್), ಸದಾಶಿವ ದೇವಾಡಿಗ(ಇಲೆಕ್ಟ್ರೀಷಿಯನ್), ವಿಠಲ ಮಡಿವಾಳ(ಲಾಂಡ್ರಿ), ಕರಿಯ ಪೂಜಾರಿ(ಕೃಷಿ), ಜಯ ಭಂಡಾರಿ(ಕ್ಷೌರ ವೃತ್ತಿ) ಹಾಗೂ ಕೆಮನು ಮಾಂಟ್ರಾಡಿ( ಮನೆಮದ್ದು) ಅವರನ್ನು ಗ್ರಾಮೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕಿಯರಾದ ವಾಣಿಶ್ರೀ ಹಾಗೂ ರಶ್ಮಿ ಎಂ.ಎಸ್.ಅವರನ್ನು ಐದನೇ ತರಗತಿ ವಿದ್ಯಾರ್ಥಿಗಳು ಗೌರವಿಸಿದರು. ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸುಕುಮಾರ್ ಜೈನ್ ಹಾಗೂ ಎಸ್ಡಿಎಂಸಿ ಸದಸ್ಯರಾಗಿ ಸೇವೆ ಸಲ್ಲಿಸಿದ ಯಶೋದಾ- ಜಯಾನಂದ, ಸುಕನ್ಯ- ಸಂಜೀವ ದಂಪತಿಯನ್ನು ಸನ್ಮಾನಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ಅಶ್ರಫ್ ವಾಲ್ಪಾಡಿ ಸ್ವಾಗತಿಸಿದರು. ಜನಾರ್ದನ ವಾಲ್ಪಾಡಿ ವಂದಿಸಿದರು. ಗ್ರಾಪಂ ಉಪಾಧ್ಯಕ್ಷ ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ಎಂ.ಎಸ್. ಐದನೇ ತರಗತಿ ವಿದ್ಯಾರ್ಥಿಗಳನ್ನು ಪರಿಚಯಿಸಿ ತನ್ನ ಪುತ್ರನ ಹೆಸರಲ್ಲಿ ಪ್ರತಿ ವರ್ಷ ನೀಡುವ ವಿದ್ಯಾರ್ಥಿವೇತನ ವಿತರಿಸಿದರು.
ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಆನಂದ, ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಸುಶ್ಮಿತಾ, ಇರ್ಷಾದ್ ಬಿ.ಕೆ., ಶೇಖರ, ಗೋಪಾಲ, ಎಸ್ಡಿಎಂಸಿ ಉಪಾಧ್ಯಕ್ಷೆ ಶೋಭಾ ಉಪಸ್ಥಿತರಿದ್ದರು.