ವ್ಯಾಕರಣ ಅರಿತರೆ ಭಾಷೆ ಕಲಿಕೆ ಸುಗಮ ; ಪ್ರಾದೇಶಿಕ ಆಯುಕ್ತ ಡಾ.ಸಂಜಯ ಅಭಿಮತ

IMG_20230808_201035.jpg
Published on

ಬೆಳಗಾವಿ : ನಾವು ಪರ ಭಾಷೆ ಕಲಿಯಲು ಹೆಸಗಾಡುವ ಅಗತ್ಯವಿಲ್ಲ. ಮಾತೃಭಾಷೆಯಲ್ಲಿ ವ್ಯಾಕರಣ ಶುದ್ಧವಾಗಿ ಅರಿತರೇ ಸಾಕು. ಎಲ್ಲ ಭಾಷೆಗಳನ್ನೂ ಸುಲಭವಾಗಿ ಕಲಿಯಬಹುದು ಎಂದು  ಪ್ರಾದೇಶಿಕ ಆಯುಕ್ತ ಡಾ.ಸಂಜಯ ಶೆಟ್ಟೆಣ್ಣವರ ಹೇಳಿದರು.  

ನಗರದ ಲಿಂಗರಾಜ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಕಾಲೇಜು ಪ್ರಾರಂಭ 2023-24’ ಕಾರ್ಯಕ್ರಮ ಉದ್ಘಾಟಿಸಿ ಮಾತಮಾಡಿದ ಅವರು,  ನಿರಂತರ ಓದು ನಮ್ಮ ವಿದ್ಯಾ ಜೀವನದ ಪರಿಪೂರ್ಣತೆಗೆ ಪೂರಕ. ಗ್ರಂಥಾಲಯವನ್ನು ದೂರಾಗಿ, ವಾಟ್ಸಾೃಫ್, ಇನಸ್ಟಾಗ್ರಾಮ್, ಫೇಸಬುಕ್‌ನಲ್ಲಿ ಸಮಯ ವ್ಯರ್ಥ ಮಾಡುವದರಿಂದ ಕಲಿಕೆ ಹಿಂದುಳಿಯಬೇಕಾಗುತ್ತದೆ. ಸಮಯ ವ್ಯರ್ಥಮಾಡದೇ ಅಧ್ಯಯನದಲ್ಲಿ ತೊಡಗಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
 

ಪ್ರಾಚಾರ್ಯ ಎಚ್.ಎಸ್.ಮೇಲಿನಮನಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಅರಬಳ್ಳಿ, ವಿನಾಯಕ ವರೂಟೆ, ಪ್ರೊ.ಡಾ.ರಾಘವೇಂದ್ರ ಹಜಗೋಳಕರ, ಡಾ.ರೇಣುಕಾ ಕಠಾರಿ, ಪ್ರೊ.ಜಿ.ಎನ್.ಶೀಲಿ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net