

ತುಮಕೂರು: ತಾಲೂಕಿನ ಮೈದಾಳ ಗ್ರಾಪಂ ವ್ಯಾಪ್ತಿಗೆ ಸಿದ್ದಗಂಗಾ ಮಠ ಸೇರಲಿದ್ದು ಗ್ರಾಪಂ ಚುನಾವಣೆಯಲ್ಲಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಮತದಾನ ನೆರವೇರಿಸಿದರು. ಆ ಮೂಲಕ ಪ್ರಜಾಪ್ರಭುತ್ವದಲ್ಲಿ ಮತದಾನದ ಜವಾಬ್ದಾರಿಯ ಸಂದೇಶ ಸಾರಿದರು.
ಮೈದಾಳ ಗ್ರಾಪಂನ 4ನೇ ವಾರ್ಡ್ ಸಿದ್ದಗಂಗಾ ಮಠದ ಕ್ಷೇತ್ರದಿಂದ 8 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಶ್ರೀಮಠದ ಆವರಣದಲ್ಲಿನ 139 ನೇ ಮತಗಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ಮತದಾನ ಆರಂಭವಾಗುತ್ತಿದ್ದಂತೆ ಸಿದ್ದಲಿಂಗಶ್ರೀಗಳು ಮತಚಲಾಯಿಸಿದರು.
ಜಿಲ್ಲೆಯ ಮೊದಲ ಹಂತದ ಗ್ರಾಪಂ ಚುನಾವಣೆಯಲಿ 5 ತಾಲೂಕುಗಳ 168 ಗ್ರಾಪಂಗಳಿಗೆ ಮತದಾನ ಆರಂಭವಾಗಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..