ಕೋಲಾರ ಜಿಲ್ಲೆಯ 156 ಗ್ರಾಮ ಪಂಚಾಯಿತಿಗಳಿಗೆ ಡಿ.22, 27ರಂದು ಚುನಾವಣೆ

30-klr-6 (1)
Published on

ಕೋಲಾರ: ಜಿಲ್ಲೆಯ 156 ಗ್ರಾಪಂಗಳಿಗೆ ಡಿ.22 ಮತ್ತು 27ರಂದು ಎರಡು ಹಂತದಲ್ಲಿ ಚುನಾವಣೆ ನಿಗದಿಯಾಗಿದ್ದು, ಮುಕ್ತ ಮತದಾನಕ್ಕೆ ಸಿದ್ಧತೆ ನಡೆದಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

ನಗರದ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ವಾತನಾಡಿ, ಕೋಲಾರ, ಮಾಲೂರು, ಶ್ರೀನಿವಾಸಪುರ ತಾಲೂಕಿನ 89 ಗ್ರಾಪಂಗಳಿಗೆ ಮೊದಲ ಹಂತ ಹಾಗೂ ಡಿ.27ರಂದು ಮುಳಬಾಗಿಲು, ಬಂಗಾರಪೇಟೆ ಹಾಗೂ ಕೆಜಿಎಫ್ ತಾಲೂಕಿನ 67 ಗ್ರಾಪಂಗಳಿಗೆ 2ನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿ.11ರಂದು ಆಧಿಸೂಚನೆ ಹೊರಡಿಸಲಾಗುವುದೆಂದು ವಾಹಿತಿ ನೀಡಿದರು.

ಚುನಾವಣೆ ೋಷಣೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಇಂದಿನಿಂದಲೇ ವಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಪಟ್ಟಣ ಮತ್ತು ನಗರ ಪ್ರದೇಶ ಹೊರತುಪಡಿಸಿ ಚುನಾವಣೆ ನಡೆಯುವ ವಾರ್ಡ್‌ಗಳಲ್ಲಿ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿಗೆ ತರಲಾಗುವುದು ಎಂದರು.

2789 ಸದಸ್ಯರು ಆಯ್ಕೆ:  156 ಗ್ರಾಪಂಗಳಿಗೆ ಒಟ್ಟು 1431 ಮಹಿಳೆಯರು, 1358 ಪುರುಷರು ಸೇರಿ 2789 ಸದಸ್ಯರು ಆಯ್ಕೆಯಾಗಬೇಕಾಗಿದ್ದು, 8,78,788 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ವಾರ ಕಾಲಾವಕಾಶವಿರುವುದರಿಂದ ಮತದಾರರ ಸಂಖ್ಯೆ ಹೆಚ್ಚಬಹುದೆಂದು ತಿಳಿಸಿದರು.

ಚುನಾವಣೆಗೆ ಪಕ್ಷದ ಚಿನ್ನೆ ಇರುವುದಿಲ್ಲ, ಚುನಾವಣಾ ಆಯೋಗದ ವಾರ್ಗಸೂಚಿ ಪ್ರಕಾರ ಅರ್ಹತೆ ಇರುವವರು ಸ್ಪರ್ಧಿಸಬಹುದಾಗಿದ್ದು, ಕೊಲೆ, ಸುಲಿಗೆ, ದರೋಡೆ ಇನ್ನಿತರ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದವರು ಸ್ಪರ್ಧೆಗೆ ಅನರ್ಹರಾಗುತ್ತಾರೆ ಎಂದರು.

ಗುತ್ತಿಗೆದಾರರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗ ಸೂಚಿಸಿಲ್ಲ, ಒಂದು ವೇಳೆ ಆದೇಶ ಬಂದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಹೋಗುವ ಜನಪ್ರತಿನಿಧಿಗಳು ಮತಯಾಚಿಸಬಹುದೇ ಹೊರತು ಆಮಿಷಗಳನ್ನು ಒಡ್ಡುವಂತಿಲ್ಲ. ಶಾಂತಿಯುತ ಹಾಗೂ ಮುಕ್ತ ಮತದಾನಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ತಿಳಿಸಿದರು.

ಚುನಾವಣೆಗೆ ಹೋಬಳಿವಾರು ಸಿದ್ಧತೆ ನಡೆದಿದೆ. ಪ್ರತಿ ತಾಲೂಕಿಗೆ ಒಬ್ಬರು, ಮತಗಟ್ಟೆಗೆ 4 ಹಾಗೂ ಜಿಲ್ಲಾ ಕೇಂದ್ರಕ್ಕೆ ಒಬ್ಬರು ವೀಕ್ಷಕರರನ್ನು ನೇಮಿಸಲಾಗುವುದು. ತಾಲೂಕುವಾರು ಸಹಾಯವಾಣಿ ತೆರೆದಿರುತ್ತದೆ. ಅಕ್ರಮ ಮದ್ಯ ಸಾಗಣೆ ಮತ್ತು ವಾರಾಟ ನಿರ್ಬಂಧಿಸಲಾಗುವುದು ಎಂದರು. ಎಡಿಸಿ ಡಾ.ಸ್ನೇಹಾ, ಮುಜರಾಯಿ ಇಲಾಖೆ ತಹಸೀಲ್ದಾರ್ ನಾಗವೇಣಿ, ಚುನಾವಣಾ ಶಾಖೆಯ ಮಂಜುಳಾ ಭಾರ್ಗವಿ ಉಪಸ್ಥಿತರಿದ್ದರು.

ಚುನಾವಣಾ ವೇಳಾ ಪಟ್ಟಿ: ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಡಿ.11, 2ನೇ ಹಂತಕ್ಕೆ 16 ಕಡೇ ದಿನ.ಮೊದಲ ಹಂತದ ನಾಮಪತ್ರ ಪರಿಶೀಲನೆ ಡಿ.12ರಂದು ಮತ್ತು 2ನೇ ಹಂತ ಡಿ.17ರಂದು ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಮೊದಲ ಹಂತಕ್ಕೆ ಡಿ.14, 2ನೇ ಹಂತಕ್ಕೆ 19ರಂದು ಕಡೇ ದಿನವಾಗಿರುತ್ತದೆ. ಮರು ಮತದಾನವಿದ್ದಲ್ಲಿ ಡಿ.24, ಡಿ.29ರಂದು ನಡೆಯಲಿದ್ದು, ಮತ ಎಣಿಕೆ ಡಿ.30ರಂದು ನಡೆಯಲಿದೆ.

ರಾಜ್ಯ ಸರ್ಕಾರ ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ್ದರೂ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಣೆಯಾಗದ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಗ್ರಾಪಂಗಳಿಗೂ ಚುನಾವಣೆ ನಡೆಯಲಿದೆ. ಸಿ.ಸತ್ಯಭಾಮ, ಡಿಸಿ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net