ಪ್ರಧಾನಿ ಯೋಜನೆಯನ್ನು ಸಫಲಗೊಳಿಸುವ ಗ್ರಾಮಜನ್ಯ - ಮುಳಿಯ ಕೇಶವ ಭಟ್ ಹೇಳಿಕೆ - ಪುತ್ತೂರಿನಲ್ಲಿ ಲೋಗೋ ಅನಾವರಣ

PTR_28 NOV_1
Published on

ಪುತ್ತೂರು: ಕೃಷಿಕರ ಸರ್ವತೋಮುಖ ಅಭಿವೃದ್ಧಿಗೆ ಪ್ರಾರಂಭವಾದ ಗ್ರಾಮಜನ್ಯ ಸಂಸ್ಥೆ ಪ್ರಧಾನಿಗಳ ದೂರದೃಷ್ಟಿಯ ಯೋಜನೆಯನ್ನು ಸಫಲಗೊಳಿಸುವ ನಿಟ್ಟಿನಲ್ಲಿ ರೂಪುಗೊಂಡಿದೆ. ಕೃಷಿಕರ ವಿವಿಧ ಉತ್ಪನ್ನಗಳನ್ನು ದೇಶ-ವಿದೇಶದಲ್ಲಿ ಮಾರುಕಟ್ಟೆ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಪುತ್ತೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ದೊಡ್ಡದಾದ ಪ್ರಯತ್ನಕ್ಕೆ ಕೈಹಾಕಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ನಿಕಟಪೂರ್ವ ಅಧ್ಯಕ್ಷ ಮುಳಿಯ ಕೇಶವ ಭಟ್ ಹೇಳಿದರು.

ಮಹತೋಭಾರ ದೇವಸ್ಥಾನದಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯ ಹೊಸ ಲೋಗೋ ಅನಾವರಣ ಮಾಡಿ ಮಾತನಾಡಿದರು.

ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಮೂಲಚಂದ್ರ ಕೆ. ಮಾತನಾಡಿ ಸಮಗ್ರವಾದ ರೈತೋಪಯೋಗಿ ಕಾರ್ಯ ನಡೆಸುವ ಕಲ್ಪನೆಯನ್ನಿಟ್ಟು ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ರೈತರಿಗೆ ಬಿದಿರು ಬೆಳೆಯಲು ಪ್ರೋತ್ಸಾಹಿಸುವ ಜತೆಗೆ ಗಿಡಗಳ ಪೂರೈಕೆ ಕಾರ್ಯ ಸಂಸ್ಥೆಯ ಮೂಲಕ ನಡೆಸಲಾಗುತ್ತದೆ. ಕೈಗಾರಿಕೋದ್ಯಮಗಳ ಕಾರ್ಯಾಗಾರದಲ್ಲಿ ದಿನಕ್ಕೆ ೩ ಸಾವಿರ ಬಿದಿರಿನ ಬೇಡಿಕೆಯನ್ನು ಇಟ್ಟಿದ್ದರು. ಬಿದಿರಿಗೆ ಉತ್ತಮ ಬೇಡಿಕೆಯಿದ್ದು, ಭವಿಷ್ಯದಲ್ಲಿ ಕಲ್ಲಿದ್ದಲಿಗಿಂತ ಉತ್ತಮ ಉರುವಲಾಗಿ ಬಳಕೆ ಮಾಡಬಹುದಾಗಿದೆ. ಸದ್ಯ ಇರುವ ಬೇಡಿಕೆಯನ್ನು ಪೂರೈಸುವಷ್ಟು ಶಕ್ತಿಯನ್ನು ಸಂಸ್ಥೆ ಹೊಂದಿಲ್ಲ ಎಂದು ತಿಳಿಸಿದರು.

ಲೋಗೋ ಅನಾವರಣ ಸಂದರ್ಭದ ಮಹಾಲಿಂಗೇಶ್ವರ ದೇವರ ಸನ್ನಿಽಯಲ್ಲಿ ವಿಶೇಷ ಪೂಜೆ ಹಾಗೂ ಸೇವೆಯನ್ನು ನಡೆಸುವ ಮೂಲಕ ಸಂಸ್ಥೆಯ ಯಶಸ್ವಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಗ್ರಾಮಜನ್ಯ ಎಫ್.ಪಿ.ಒ. ನಿರ್ದೇಶಕರಾದ ರಾಮ ಪ್ರತೀಕ್ ಕರಿಯಾಲ, ನಿರಂಜನ್ ಪೋಳ್ಯ, ಶ್ರೀನಂದನ್ ಕೆ., ಶ್ರೀಹರ್ಷ ಎ., ಕಾರ್ಯನಿರ್ವಹಣಾಽಕಾರಿ ರಾಜೇಶ್ ಸುವರ್ಣ, ಎಕೌಂಟ್ಸ್ ಮ್ಯಾನೇಜರ್ ಶಶಿಧರ್ ರಾವ್, ಪ್ರೊಡಕ್ಷನ್ ಮ್ಯಾನೇಜರ್ ಪವನ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net