

ವಿಜಯವಾಣಿ ಸುದ್ದಿಜಾಲ ಆನೇಕಲ್
ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆ ನಡೆಯಿತು.
ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆಗಳ ವರದಿಗಳನ್ನು ಮಂಡಿಸಿದರು. ಗ್ರಾಮಸ್ಥರು ಅಹವಾಲುಗಳನ್ನು ಸಲ್ಲಿಸಿದರು.
ಬ್ಯಾಗಡದೇನಹಳ್ಳಿ ಶಾಲೆಯಲ್ಲಿ ಮಂತ್ರ ಪ್ರತಿಷ್ಠಾನದ ವತಿಯಿಂದ 3 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ್ದ ಪ್ರಯೋಗಾಲಯವನ್ನು ರಾತ್ರೋರಾತ್ರಿ ಹೊಡೆದುಹಾಕಿ ಸಾಮಗ್ರಿಗಳನ್ನು ಹಾನಿ ಮಾಡಲಾಗಿದೆ. ಚಿಕ್ಕಹಾಗಡೆ ಗೇಟ್ ಸಮೀಪ ನಿರ್ಮಿಸಿರುವ ಪೊಲೀಸ್ ಚೌಕಿ ಕಾರ್ಯನಿರ್ವಹಿಸುತ್ತಿಲ್ಲ. ರಸ್ತೆ ಬದಿಯಲ್ಲಿಯೇ ಸಿಗರೇಟ್ ಅಂಗಡಿಗಳು ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಯಲ್ಲಮ್ಮನಪಾಳ್ಯ ಸೇರಿ ಗ್ರಾಪಂ ವ್ಯಾಪ್ತಿಯ ಎರಡೂ ಕಡೆ ಸರ್ಕಾರಿ ಶಾಲೆಗಳ ಅವಶ್ಯಕತೆ, ರಸ್ತೆ, ಕುಡಿಯುವ ನೀರು, ಪಡಿತರ ವಿತರಣೆ ಸೇರಿ ವಿವಿಧ ಸಮಸ್ಯೆಗಳನ್ನು ಗ್ರಾಮಸಭೆಯಲ್ಲಿ ಸಾರ್ವಜನಿಕರು ಬಹಿರಂಗಗೊಳಿಸಿದರು.
ಗಾಪಂ ಅಧ್ಯಕ್ಷೆ ಮಂಜುಳಾ ಮುನಿರಾಜು ಮಾತನಾಡಿ, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಲೆದಾಟ ತಪ್ಪಿಸಲು ಗ್ರಾಮಸಭೆಗಳು ಉತ್ತಮ ವೇದಿಕೆಯಾಗಿವೆ. ಗ್ರಾಮಸಭೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳುವುದರಿಂದ ಸಮಸ್ಯೆಗಳನ್ನು ತಿಳಿಸಲು ಉಪಯುಕ್ತವಾಗಿದೆ ಮತ್ತು ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲಿದೆ ಎಂದರು.
ಸದಸ್ಯರಾದ ರತ್ನಮ್ಮ ರಾಜಪ್ಪ, ವೇಣುಗೋಪಾಲ್, ರತೀಶ್, ಜಯಪ್ರಕಾಶ್, ಗೀತಾ, ಸತೀಶ್, ಚಂದ್ರಶೇಖರ್, ರಾಮಸ್ವಾಮಿ, ತಿಲಕ್, ಜಗದೀಶ್, ಕವಿತಾ, ವೀಣಾ, ಶಾಂತಮ್ಮ, ರೇಣುಕಾ, ಚೈತ್ರಾ, ಭಾವನಾ, ಲೋಕೇಶ್, ಸರಸ್ವತಮ್ಮ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಿ.ಎಲ್.ನಾಗರಾಜು ಇದ್ದರು.