ಗ್ರಾಪಂ ಸದಸ್ಯರ ರಾಜೀನಾಮೆ ವಾಪಾಸ್

10SND-04
Published on

ಸಿಂಧನೂರು: ಆರ್.ಎಚ್. ಕ್ಯಾಂಪ್ ಸಂಖ್ಯೆ-1 ಗ್ರಾಪಂನಲ್ಲಿ ಆ.4 ರಂದು ರಾಜೀನಾಮೆ ಸಲ್ಲಿಸಿದ್ದ 15 ಸದಸ್ಯರ ಪೈಕಿ ಗುರುವಾರ 12 ಜನರು ರಾಜೀನಾಮೆ ಹಿಂಪಡೆದಿದ್ದಾರೆ.

ರಾಣಿ ಮಂಡಲ್, ಚಂದ್ರಿಮಾ ಸರ್ಕಾರ್, ರೇಣುಕಾ ನಾಯಕ್, ವಾಸುದೇವರೆಡ್ಡಿ, ಅರ್ಜುನ್ ಗೋಲ್ದಾರ್, ಸಂಧ್ಯಾ ಮಂಡಲ್, ಮುಕ್ತ ವಿಶ್ವಾಸ್, ಸಂಧ್ಯಾ ಢಾಲಿ, ಕರಿಯಪ್ಪ, ಮಿಥಾಲಿ, ಶಿವಕುಮಾರ್, ಬಸವರಾಜ, ರಾಜೀನಾಮೆ ಹಿಂಪಡೆದವರು. ಮಾಜಿ ಅಧ್ಯಕ್ಷೆ ರೇಣುಕಾ ನಾಯಕ್ ಮಾತನಾಡಿ, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಮುಸ್ಲಿಂ ಸಮುದಾಯ ಸದಸ್ಯ ಅಧ್ಯಕ್ಷರಾಗಿದ್ದಾರೆ. ಇದರಿಂದ ಅಸಮಾಧಾನಗೊಂಡು 15 ಜನ ಸದಸ್ಯರು ಕೆಲವರ ಒತ್ತಡದಿಂದ ರಾಜೀನಾಮೆ ನೀಡಿದ್ದೆವು. ಗ್ರಾಮದ ಅಭಿವೃದ್ಧಿಗೋಸ್ಕರ ಹಾಗೂ ಭಾವೈಕ್ಯದ ದೃಷ್ಟಿಯಿಂದ ರಾಜೀನಾಮೆ ವಾಪಸ್ ಪಡೆದಿದ್ದೇವೆ ಎಂದರು.
ಗ್ರಾಪಂ ಅಧ್ಯಕ್ಷ ಎಂ.ರೆಹಮತ್ ಪಾಷಾ ಮಾತನಾಡಿ, ಇನ್ನುಳಿದ 3 ಜನ ಸದಸ್ಯರು ಕೂಡ ರಾಜೀನಾಮೆ ವಾಪಾಸ್ ಪಡೆಯಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಸದಸ್ಯರ ದಾರಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದರು. ಬಾದರ್ಲಿ ಗ್ರಾಪಂ ಅಧ್ಯಕ್ಷ ದಿಲೀಪ್ ಬಿಸ್ವಾಸ್, ಸದಸ್ಯರಾದ ಮೃತ್ಯುಂಜಯ, ಸಮೀದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net