ಡಿಸೆಂಬರ್ ಕೊನೆಯ ವಾರ ಗ್ರಾಪಂ ಚುನಾವಣೆ?

EVM
Published on

ಬೆಂಗಳೂರು: ಅಧಿಕಾರ ವಿಕೇಂದ್ರೀಕರಣದ ಮೊದಲ ಮೊದಲ ಮೆಟ್ಟಿಲು ಎಂದೇ ಕರೆಯಲ್ಪಡುವ ಗ್ರಾಮ ಪಂಚಾಯಿತಿ ಚುನಾವಣೆಗೆ ಹೈಕೋರ್ಟ್ ಸೂಚನೆ ನೀಡಿದ್ದು, ಚುನಾವಣಾ ಆಯೋಗ ಡಿಸೆಂಬರ್ ಕೊನೆಯ ವಾರ ಇಲ್ಲವೇ ಜನವರಿ ಮೊದಲ ವಾರ ಚುನಾವಣೆ ನಡೆಸುವ ಸಾಧ್ಯತೆಗಳಿವೆ.

ಸರ್ಕಾರ ಹಾಗೂ ಆಯೋಗಗಳ ನಡುವಿನ ಹಗ್ಗ ಜಗ್ಗಾಟಕ್ಕೆ ಹೈಕೋರ್ಟ್ ಮಂಗಳ ಹಾಡಿದೆ. ಆಯೋಗ ಚುನಾವಣೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರೂ ಸರ್ಕಾರ ಕರೊನಾ ಕಾರಣದಿಂದ ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಪತ್ರ ಬರೆದಿತ್ತು. ಮೀಸಲಾತಿ ನಿಗದಿ ವಿಚಾರದಲ್ಲಿ ಚುನಾವಣೆ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು.

ಹೈಕೋರ್ಟ್ 3 ವಾರಗಳ ಒಳಗೆ ಅಧಿಸೂಚನೆ ಹೊರಡಿಸಲು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದು, ಸುಮಾರು 5800ಕ್ಕೂ ಹೆಚ್ಚು ಗ್ರಾಪಂ ಗಳಿಗೆ ಡಿಸೆಂಬರ್ ಕೊನೆಯ ವಾರ ಇಲ್ಲವೆ ಜನವರಿ ಮೊದಲ ವಾರ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net