ಗ್ರಾಮ ಪಂಚಾಯಿತಿ ಚುನಾವಣೆ- ಮದ್ಯ ವಿತರಣೆಗೆ ಹೊರಟವರ ಬಂಧನ

Kolara illegal liqour seized
Published on

ಕೋಲಾರ: ಗ್ರಾಮ ಪಂಚಾಯಿತಿ ಚುನಾವಣೆ-2020ರ ಹಿನ್ನೆಲೆಯಲ್ಲಿ ಮುಳಬಾಗಿಲು ತಾಲೂಕಿನ ಗಡ್ಡೂರು ಗ್ರಾಮದ ಬಸ್ ನಿಲ್ದಾಣ ಬಳಿ ಒಂದು ದ್ವಿಚಕ್ರವಾಹನದಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಅಬಕಾರಿ ಅಧಿಕಾರಿಗಳು ಮದ್ಯದ 192 ಟೆಟ್ರಾ ಪ್ಯಾಕೆಟ್ ಗಳನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ಆರ್.ಮಣಿ ಮತ್ತು ಈ.ಕಿರಣ್ ಬಂಧಿತರು. ಎರಡು ಸ್ಕೂಲ್ ಬ್ಯಾಗ್‍ನಲ್ಲಿ 180 ಎಂಎಲ್ ನ ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ192 ಟೆಟ್ರಾ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದರು. ವಿಷಯ ತಿಳಿದ ಅಬಕಾರಿ ಇಲಾಖೆಯ ಉಪ ಆಯುಕ್ತ ಎ.ರವಿಶಂಕರ್ ನಿರ್ದೇಶನದ ಮೇರೆಗೆ ಅಬಕಾರಿ ಇಲಾಖೆಯ ನಿರೀಕ್ಷಕ ಕೆ.ಸಿ.ರಾಮು ನೇತೃತ್ವದಲ್ಲಿ ಅಬಕಾರಿ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ 34.560 ಲೀಟರ್‍ನಷ್ಟು ವಿಸ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದುದು.

ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಬಕಾರಿ ಇಲಾಖೆಯ ಉಪ ನಿರೀಕ್ಷಕ ವೇಣುಗೋಪಾಲ್, ಸಿಬ್ಬಂದಿಗಳಾದ ಎಸ್.ಅಂಬರೀಷ್, ಸುಬ್ರಮಣಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net