

ಮಂಡ್ಯ: ಜಿಲ್ಲೆಯ ಏಳು ತಾಲೂಕಿನ 233 ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ಮುಂದಿನ 30 ತಿಂಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಲು ಜೂ.12ರಿಂದ 17ರವರೆಗೆ ತಾಲೂಕುವಾರು ಸಭೆ ಆಯೋಜಿಸಲಾಗಿದೆ.
ಮಂಡ್ಯ ತಾಲೂಕಿಗೆ ಸಂಬಂಧಿಸಿದಂತೆ 12ರಂದು ಬೆಳಗ್ಗೆ 11ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಭವನ, ಮದ್ದೂರು ತಾಲೂಕಿಗೆ ಸಂಬಂಧಿಸಿದಂತೆ 14ರಂದು ಬೆಳಗ್ಗೆ 11ಗಂಟೆಗೆ ಸಂಜಯ ಚಿತ್ರಮಂದಿರ, 14ರಂದು ಮಧ್ಯಾಹ್ನ 3.30ಕ್ಕೆ ಮಹಾಲಕ್ಷ್ಮೀ ಚಿತ್ರಮಂದಿರದಲ್ಲಿ ಮಳವಳ್ಳಿ ತಾಲೂಕು, 15ರಂದು ಬೆಳಗ್ಗೆ 11ಗಂಟೆಗೆ ಶ್ರೀದೇವಿ ಚಿತ್ರಮಂದಿರದಲ್ಲಿ ಶ್ರೀರಂಗಪಟ್ಟಣ ಮತ್ತು ಮಧ್ಯಾಹ್ನ 3.30ಕ್ಕೆ ವೆಂಕಟೇಶ್ವರ ಚಿತ್ರಮಂದಿರದಲ್ಲಿ ನಾಗಮಂಗಲ, 17ರಂದು ಮಧ್ಯಾಹ್ನ 3.30ಕ್ಕೆ ಬಸವೇಶ್ವರ ಚಿತ್ರಮಂದಿರದಲ್ಲಿ ಕೆ.ಆರ್.ಪೇಟೆ ತಾಲೂಕಿನ ಸಂಬಂಧಿಸಿದ ಮೀಸಲಾತಿ ನಿಗದಿ ಸಭೆ ನಡೆಯಲಿದೆ.
ಜಿಲ್ಲಾ ಪಂಚಾಯಿತಿ ರಾಷ್ಟ್ರೀಯ ಮಾಹಿತಿ ಕೇಂದ್ರದ ಮೂಲಕ 1993ರಿಂದ 2020ರ ಮೊದಲನೆಯ ಅವಧಿಯವರೆಗೆ ನೀಡಿರುವ ಮೀಸಲಾತಿಯನ್ನು ತಂತ್ರಾಂಶದಲ್ಲಿ ಅಳವಡಿಸಿ ಆಯಾ ತಾಲೂಕಿನ ಗ್ರಾಮ ಪಂಚಾಯಿತಿ ಸದಸ್ಯರ ಸಮಕ್ಷಮ ಮೀಸಲಾತಿ ನಿಗಧಿಪಡಿಸಲಾಗುವುದು. ಒಂದು ವೇಳೆ ಹೆಚ್ಚಿನ ಗ್ರಾಪಂಗಳು ಅರ್ಹವಿದ್ದಲ್ಲಿ ಲಾಟರಿ ಮುಖಾಂತರ ಮೀಸಲಾತಿಯನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.