

ಮೈಸೂರು: ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ಜೋರಾಗಿದ್ದು, ಎಲ್ಲ ಪಕ್ಷಗಳು ಗೆಲುವಿನ ರಣತಂತ್ರ ಎಣೆಯಲು ಸಿದ್ಧವಾಗಿವೆ. ಹೀಗಿರುವಾಗ ಜೆಡಿಎಸ್ ಪಕ್ಷದ ವರಿಷ್ಠರು ತೆಗೆದುಕೊಂಡಿರುವ ತೀರ್ಮಾನ ಬಹಳ ಅಚ್ಚರಿ ಮೂಡಿಸಿದೆ.
ಪಕ್ಷದ ಪ್ರಮುಖ ನಾಯಕರಿಗೆ ಕ್ಷೇತ್ರವಾರು ಹೊಣೆಗಾರಿಕೆ ಹಂಚಿಕೆ ಮಾಡಲಾಗಿದೆ. ಸ್ಥಳೀಯ ಶಾಸಕರಿದ್ದರೂ ನಾಯಕರ ಅದಲು-ಬದಲು ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಶಾಸಕ ಜಿ.ಟಿ.ದೇವೇಗೌಡರನ್ನು ಚಾಮುಂಡೇಶ್ವರಿ ಬದಲು ಹುಣಸೂರಿಗೆ ಶಿಫ್ಟ್ ಮಾಡಲಾಗಿದೆ.
ಜಿಟಿಡಿ ಮಾತ್ರವಲ್ಲ ಪಿರಿಯಾಪಟ್ಟಣಕ್ಕೆ ತಿ.ನರಸೀಪುರ ಶಾಸಕರಿಗೆ ಹೊಣೆ ನೀಡಲಾಗಿದೆ. ಜೆಡಿಎಸ್ ಕ್ಷೇತ್ರವಾರು ಹೊಣೆಗಾರಿಕೆ ಹಂಚಿಕೆ ಮಾಡಿರುವ ಪಟ್ಟಿ ಈ ಕೆಳಕಂಡಂತಿದೆ.