

| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಗ್ರಾಮ ಪಂಚಾಯಿತಿ ಚುನಾವಣೆ ಯಾವುದೇ ಪಕ್ಷದ ಚಿಹ್ನೆ ಆಧಾರ ಹಾಗೂ ನೇರ ರಾಜಕೀಯ ಭಾಗವಹಿಸುವಿಯಲ್ಲಿ ನಡೆಯುವುದಿಲ್ಲ. ಆದರೆ, ಪಕ್ಷ ಸಂಘಟನೆ ದೃಷ್ಟಿಯಿಂದ ಎಲ್ಲ ಪಕ್ಷಗಳು ಹಳ್ಳಿ ಕದನವನ್ನು ಪ್ರತಿಷ್ಠೆಯಾಗಿ ಪರಿಗಣಿಸಿವೆ. ಆ ನಿಟ್ಟಿನಲ್ಲಿ ‘ಗ್ರಾಮಾಯಣ’ದ ಎಲ್ಲ ಚಟುವಟಿಕೆಗಳಲ್ಲಿ ಪಕ್ಷಗಳು ಪರೋಕ್ಷವಾಗಿ ಭಾಗವಹಿಸುತ್ತಿವೆ.
ಪಕ್ಷ ಸಂಘಟನೆ ಮತ್ತು ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ಪಡೆಯುವ ದೃಷ್ಟಿಯಿಂದ ರಾಜಕೀಯ ಪಕ್ಷಗಳು ಗ್ರಾಪಂ ಆಡಳಿತ ಚುಕ್ಕಾಣಿ ಹಿಡಿಯಲು ತಂತ್ರ ರೂಪಿಸಿದ್ದು, ಈಗಾಗಲೆ ಸಚಿವರು, ಶಾಸಕರು ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗಳನ್ನು ಹುಡುಕಿ ಕಣಕ್ಕಿಳಿಸಿದ್ದಾರೆ. ಅದಲ್ಲದೆ ಅವಿರೋಧ ಆಯ್ಕೆಯಾಗಿರುವ ಬಹುತೇಕ ಅಭ್ಯರ್ಥಿಗಳು ಗ್ರಾಪಂ ವ್ಯಾಪ್ತಿಯ ದೇವಸ್ಥಾನಗಳಿಗೆ ಕನಿಷ್ಠ 2 ರಿಂದ 5 ಲಕ್ಷ ರೂ.ದೇಣಿಗೆ ನೀಡಿ ಆಯ್ಕೆಯಾಗಿದ್ದಾರೆ. ಕೆಲವೆಡೆ ಪ್ರತಿಸ್ಪರ್ಧಿಗಳಿಗೆ ಹಣ ನೀಡಿ ಕಣದಿಂದ ಹಿಂದೆ ಸರಿಸಿದ್ದಾರೆ. ಅವಿರೋಧ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಸೆಳೆದುಕೊಳ್ಳಲು ಅಧ್ಯಕ್ಷ ಸ್ಥಾನದ ಆಮಿಷ ಸೇರಿ ಹಲವು ತಂತ್ರ ರೂಪಿಸಿದ್ದಾರೆ.
ದೇವರೇ ಶಿಕ್ಷೆ ನೀಡಲೆಂದು ಪ್ರಮಾಣ!
ಧಾರವಾಡ: ಸಂಶಿ ಗ್ರಾಪಂನ 5 ಮತ್ತು 6 ನೇ ವಾರ್ಡ್ಗಳಲ್ಲಿ ಮತದಾರರ ಮನೆ ಮುಂದೆ ನವಣೆ, ಸಾಸಿವೆ ಕಾಳು ಪತ್ತೆಯಾಗಿದ್ದು, ವಾಮಾಚಾರದ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಆತಂಕಕ್ಕೀಡಾದ ಎರಡು ವಾರ್ಡ್ ಗಳಿಗೆ ಸ್ಪರ್ಧಿಸಿರುವ 21 ಅಭ್ಯರ್ಥಿಗಳು ಒಂದೆಡೆ ಸೇರಿ ರ್ಚಚಿಸಿ, ‘ಈ ವಾಮಾಚಾರವನ್ನು ನಾನು ಮಾಡಿಲ್ಲ, ಅದಕ್ಕೆ ಕುಮ್ಮಕ್ಕು ನೀಡಿಲ್ಲ. ತಪ್ಪಿದ್ದಲ್ಲಿ ದೇವರೇ ಶಿಕ್ಷೆ ನೀಡಲಿ’ ಎಂದು ಪ್ರಮಾಣ ಮಾಡಿದ್ದಾರೆ. ವಾಮಾಚಾರದ ಪರಿಣಾಮ ನಮ್ಮ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ? ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸಾರ್ವಜನಿಕರು, ಎರಡೂ ವಾರ್ಡ್ಗಳ ಚುನಾವಣೆ ರದ್ದುಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ.
ಅಭ್ಯರ್ಥಿಗಳು ಅವಿರೋಧ ಆಯ್ಕೆಗಾಗಿ ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದಾರೆ. ಈ ಚುನಾವಣೆಯು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನೇ ಮೀರಿಸುತ್ತಿದೆ. ಆರ್ಥಿಕವಾಗಿ ಸದೃಢವಾಗಿರುವವರು ಮಾತ್ರ ಚುನಾವಣೆಗೆ ಸ್ಪರ್ಧಿಸುವ ವ್ಯವಸ್ಥೆ ನಿರ್ವಣವಾಗಿರುವುದು ಖೇದಕರ. | ಸುರೇಶ ಕುದರಿ ಮಾರುತಿ ಎಸ್.ಪಾಟೀಲ, ನ್ಯಾಯವಾದಿ, ಬೆಳಗಾವಿ
ಪ್ರಿಂಟಿಂಗ್ಪ್ರೆಸ್ಗೆ ವರ
ಬೆಂಗಳೂರುಗ್ರಾಮಾಂತರ: ಕರೊನಾ ಲಾಕ್ಡೌನ್ನಿಂದ ಆರ್ಥಿಕವಾಗಿ ಜಜ್ಜರಿತಗೊಂಡಿದ್ದ ಪ್ರಿಂಟಿಂಗ್ ಪ್ರೆಸ್ಗಳಿಗೆ ಪಂಚಾಯಿತಿ ಚುನಾವಣೆಗಳು ಚೇತರಿಕೆಯ ಟಾನಿಕ್ ನೀಡಿವೆ. ಧೂಳು ಹಿಡಿಯುವಂತಿದ್ದ ಪ್ರಿಂಟಿಂಗ್ ಯಂತ್ರಗಳು ಸದ್ದು ಮಾಡುತ್ತಿದ್ದು, ಪ್ರಿಂಟಿಂಗ್ ಪ್ರೆಸ್ ಅವಲಂಬಿತರಿಗೆ ಆರ್ಥಿಕ ಚೈತನ್ಯ ನೀಡಿದೆ. ಓರ್ವ ಅಭ್ಯರ್ಥಿ ಏನಿಲ್ಲವೆಂದರೂ 500ರಿಂದ ಸಾವಿರದವರೆಗೆ ಕರಪತ್ರ ಮುದ್ರಣಕ್ಕೆ ಆರ್ಡರ್ ನೀಡುತ್ತಾನೆ. ಇದು ಪ್ರಿಂಟಿಗ್ ಪ್ರೆಸ್ ಮಾಲೀಕರಿಗೆ ವರದಾನವಾಗಿದೆ.
9ನೇ ಬಾರಿ ಸ್ಪರ್ಧೆಗಿಳಿದ ಅಜ್ಜ
ಗದಗ: ರೋಣ ತಾಲೂಕಿನ ಸವಡಿ ಗ್ರಾಮದ 6ನೇ ವಾರ್ಡಿನಿಂದ ಸ್ಪರ್ಧಿಸಿರುವ 78 ವರ್ಷದ ಬಸಪ್ಪ ಶಿವಮೂರ್ತೆಪ್ಪ ಮಂಗಳೂರ ಸತತ ಒಂಬತ್ತು ಬಾರಿ ಸ್ಪರ್ಧಿಸುವ ಮೂಲಕ ಕಣವನ್ನು ರಂಗೇರಿಸಿದ್ದಾರೆ. ಸತತ 7 ಬಾರಿ ವಿಜೇತರಾಗಿದ್ದ ಬಸಪ್ಪ, ಕಳೆದ ಬಾರಿ ಪರಾಭವಗೊಂಡಿದ್ದರು. ಈಗ 9ನೇ ಬಾರಿಗೆ ಸ್ಪರ್ಧಿಸಿ ಅದೃಷ್ಟ ಪರೀಕ್ಷೆಗೊಡ್ಡಿದ್ದಾರೆ.
ಅಭ್ಯರ್ಥಿ ಆತ್ಮಹತ್ಯೆ
ಬಳ್ಳಾರಿ: ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಗರಿಬೊಮ್ಮನಹಳ್ಳಿ ತಾಲೂಕು ದಶಮಾಪುರ ಗ್ರಾಪಂ ವ್ಯಾಪ್ತಿಯ ನಾಣ್ಯಪುರದ ವಡ್ಡರ ಮಲಿಯಪ್ಪ (40) ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡಹೆಂಡತಿ ನಡುವಿನ ಜಗಳವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಸ್ಪರ್ಧಾಳು ಸಾವು
ಧಾರವಾಡ: ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಮನಗುಂಡಿ ಗ್ರಾಮದ ಶೋಭಾ ಹಡಪದ (36) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮನಗುಂಡಿ ಗ್ರಾ.ಪಂ.ನ 2ನೇ ವಾರ್ಡ್ಗೆ ಅ ವರ್ಗದ ಮಹಿಳಾ ಸ್ಥಾನಕ್ಕೆ ಸ್ಪರ್ಧಿಸಿದ್ದರು.