ಗ್ರಾಮಲೆಕ್ಕಾಧಿಕಾರಿ, ಸಹಾಯಕನ ಬಂಧನ

Arrest Kaidhi
Published on

ಹಾನಗಲ್ಲ: ನೆರೆ ಪರಿಹಾರ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ಲ ತಾಲೂಕಿನ ಗ್ರಾಮಲೆಕ್ಕಾಧಿಕಾರಿ ಹಾಗೂ ಗ್ರಾಮ ಸಹಾಯಕನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ತಾಲೂಕಿನ ಬೆಳಗಾಲಪೇಟೆ ಗ್ರಾಮಲೆಕ್ಕಾಧಿಕಾರಿ ಹೊನ್ನಪ್ಪ ಮಲಕಪ್ಪನವರ, ಬಿಂಗಾಪುರದ ಗ್ರಾಮ ಸಹಾಯಕ ಹನುಮಂತಪ್ಪ ಕಾಳೇರ ಎಂಬುವರನ್ನು ಶುಕ್ರವಾರ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಬೆಳಗಾಲಪೇಟೆ ಕ್ಷೇತ್ರದಲ್ಲಿ ಪರಿಹಾರ ಹಣ ಅಕ್ರಮ ವರ್ಗಾವಣೆಯ 35ಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿರುವುದಾಗಿ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಗ್ರಾಮಸಹಾಯಕನ ಪಾತ್ರವೂ ಕಂಡುಬಂದಿರುವುದರಿಂದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net