Jatra 12 ವರ್ಷಗಳ ಬಳಿಕ ಸಾಂಬ್ರಾಣಿ ಗ್ರಾಮ ದೇವಿ ಜಾತ್ರೆ

Jatra
Published on
ಹಳಿಯಾಳ: ಸುಧೀರ್ಘ 12 ವರ್ಷಗಳ ಬಳಿಕ ಸಾಂಬ್ರಾಣಿ ಗ್ರಾಮದ ಗ್ರಾಮದೇವಿ ದ್ಯಾಮವ್ವಾದೇವಿ ಹಾಗೂ ದುರ್ಗವ್ವಾ ದೇವಿಯರ Jatra ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದ್ದು  ಹಿಂದೂ, ಮುಸ್ಲಿಂ, ಕ್ರೈಸ್ತರು ಭಾವೈಕ್ಯದಿಂದ ಆಚರಿಸುವ ಜಾತ್ರೆ ಇದಾಗಿರುವುದು ವಿಶೇಷವಾಗಿದೆ.
ಈ ಹಿಂದೆ ನೂರು ವರ್ಷಗಳ ನಂತರ 2013ರಲ್ಲಿ ಜಾತ್ರೆ Jatra ನಡೆದಿತ್ತು. ಈ ಬಾರಿ  ಫೆ.3 ರಂದು ಮಹಾರಥೋತ್ಸವ, ಫೆ. 4 ರಿಂದ 6 ರವರೆಗೆ ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ, ಫೆ.7ರಂದು ಸಿಮೋಲ್ಲಂಘನೆ, ಫೆ.10 ರಂದು ದೇವಿಯ ಪುನರ್‌ ಪ್ರಾಣ ಪ್ರತಿಷ್ಠಾಪನೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ  ಜಾತ್ರೆಯ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿದ್ದು  ಫೆ.10ರವರೆಗೆ  ಜಾತ್ರಾ ಮಹೋತ್ಸವ ನಡೆಯಲಿದೆ.
ಜಾತ್ರೆ ಅಂಗವಾಗಿ ಗ್ರಾಮವೆಲ್ಲಾ ತಳಿರು ತೋರಣದಿಂದ, ವಿದ್ಯುತ್ ದೀಪಲಂಕಾರದಿಂದ ಸಿಂಗರಿಸಲಾಗಿದೆ. ಗ್ರಾಮದಲ್ಲಿ ರಸ್ತೆ , ಕುಡಿಯುವ ನೀರಿನ ವ್ಯವಸ್ಥೆ ಸುಧಾರಿಸಲಾಗಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.‌

Jatra ಚರ್ಚ್‌, ದರ್ಗಾಕ್ಕೂ ಸಿಂಗಾರ

ಜಾತ್ರೆ ಹಿನ್ನೆಲೆಯಲ್ಲಿ ದೇವಸ್ಥಾನದ ಜೊತೆಗೆ ಗ್ರಾಮದ ದರ್ಗಾ, ಚರ್ಚ್‍ಗಳಿಗ ಸುಣ್ಣ ಬಣ್ಣಗಳಿಂದ ಸಿಂಗರಿಸಲಾಗಿರುವುದು ವಿಶೇಷವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಜಾತ್ರೆ ಆಚರಣೆ ಸಮಿತಿಯ ಹಿರಿಯ ಸದಸ್ಯ ಇಂದಿರಾಕಾಂತ ಕಾಮಕರ ಅವರು  ಜಾತ್ರೆಯಲ್ಲಿ ರಥೋತ್ಸವಕ್ಕಾಗಿ  65 ಅಡಿ ಎತ್ತರದ 6 ಚಕ್ರದ ರಥವನ್ನು 5 ಅಂಕಣಗಳಲ್ಲಿ ನಿರ್ಮಿಸಲಾಗಿದೆ.
ದೇವಿಯನ್ನು ರಥದಲ್ಲಿ ಪ್ರತಿಷ್ಠಾಪಿಸುವ ಅಂಕಣ 14x16 ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಪ್ರತಿಯೊಂದು ಅಂಕಣದಲ್ಲಿ ಗ್ರಾಮದ ಎಲ್ಲಾ ದೇವಸ್ಥಾನದ ದೇವಿ ಹಾಗೂ ದೇವರುಗಳ ಭಾವಚಿತ್ರವನ್ನು ಅಳವಡಿಸಿರುವುದರ ಜೊತೆಗೆ ಶರಣರ, ದಾಸರ, ರಾಷ್ಟ್ರ ಪುರುಷರ ಭಾವಚಿತ್ರವನ್ನು ಅಳವಡಿಸಲಾಗಿದೆ‌ ಎಂದರು‌.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net