

ಕಲಘಟಗಿ: ತಾಲೂಕಿನ ಆಲದಕಟ್ಟಿ ಗ್ರಾಮದ ಗ್ರಾಮದೇವಿ ಜಾತ್ರೆಗೆ ಸೋಮವಾರ ಚಾಲನೆ ನೀಡಲಾಯಿತು. ಗಣಪತಿ ಹವನ, ಪಂಚಗವ್ಯ ಹವನ, ಪ್ರಧಾನ ಸಂಕಲ್ಪ ಮುದುಪರ್ಕ, ಕೃತಿ ಚಾರಣ, ಶ್ರೀ ದುರ್ಗಾ ಸಪ್ತಶತೆ ಸೇರಿ ಧಾರ್ವಿುಕ ಕಾರ್ಯಕ್ರಮಗಳು ನೆರವೇರಿದವು.
ಅತ್ತಿವೇರಿ ಬಸವಧಾಮದ ಬಸವೇಶ್ವೇರಿ ಮಾತಾಜಿ ಅವರಿಂದ ಸೋಮವಾರ ಪ್ರವಚನ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಬಮ್ಮಿಗಟ್ಟಿ, ಹನಮಾಪುರ, ತಾವರಗೇರಿ, ಯಲವಧಾಳ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರಿಂದ ಮಂಗಳವಾರ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ರಾತ್ರಿ 8 ಗಂಟೆಗೆ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರಿಂದ ಪ್ರವಚನ ನೀಡಿದರು. ರಾತ್ರಿ 10 ಗಂಟೆಗೆ ಓಂಕಾರ ಮೇಲೋಡಿಸ್ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಏ. 9ರಂದು ಸಂಜೆ 5 ಗಂಟೆಗೆ ಗಡಿ ಕಟ್ಟುವುದು. ರಾತ್ರಿ 8 ಗಂಟೆಗೆ ಧರ್ಮ ಜಾಗೃತಿ ಕಾರ್ಯಕ್ರಮ ನೆರವೇರಲಿದೆ ಎಂದು ಗ್ರಾಮದ ಹಿರಿಯರಾದ ತಮ್ಮಣ್ಣ ಕೆಲಗೇರಿ ತಿಳಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಏ. 9ರಂದು ರಾತ್ರಿ 10 ಗಂಟೆಗೆ ರಮೇಶ ಬಡಿಗೇರ ವಿರಚಿತ ‘ತಾಯಿಯ ಋಣ ಮಣ್ಣಿನ ಗುಣ’ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ರಂಗಭೂಮಿ ಕಲಾವಿದ ರಾಜಕುಮಾರ ದೊಡಮನಿ ಹಾಗೂ ಚಲನಚಿತ್ರ ನಟಿ ಜ್ಯೋತಿ ಮಂಗಳೂರು ಅಭಿನಯಿಸಲಿದ್ದಾರೆ. ಬೆಲವಂತರದ ಮಲ್ಲಯ್ಯಸ್ವಾಮಿ ಪೂಜಾರ, ಆಲದಕಟ್ಟಿಯ ದ್ಯಾಮಣ್ಣ ಕೇಣಿ ಸಂಗೀತ ಸೇವೆ ನೀಡುವರು. ಶಂಕರ ದೊಡಮನಿ, ನಿಂಗಪ್ಪ ಜಮ್ಮಿಹಾಳ ನಿರೂಪಣೆ ಮಾಡಲಿದ್ದಾರೆ. ಬಸಪ್ಪ ಹೊಸಮನಿ, ಬಸಪ್ಪ ಇಂದೂರ, ಶಂಕ್ರಪ್ಪ ಪೂಜಾರ, ಮಹಾದೇವಪ್ಪ ದೊಡಮನಿ, ಬಸಪ್ಪ ಹೊಸಮನಿ, ಮಂಜುನಾಥ ಕುಟ್ರಿ, ಇತರರಿದ್ದರು.