ಗ್ರಾಮಸಭೆಗಳ ಮೂಲಕ ಅರ್ಹರ ಆಯ್ಕೆ

CTD 14 NEWS MLA-01
Published on

ಚಿತ್ರದುರ್ಗ: ನನ್ನ ಕ್ಷೇತ್ರಕ್ಕೆ 2636 ಮನೆಗಳನ್ನು ಮಂಜೂರು ಮಾಡಿಸಿದ್ದು, ಬಹುತೇಕ ಎಲ್ಲ ಸಮುದಾಯದ ಫಲಾನುಭವಿಗಳನ್ನು ಗ್ರಾಮಸಭೆಗಳ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಸೊಲ್ಲಾಪುರ ನಾಯಕರಹಟ್ಟಿಯ 42 ಹಾಗೂ ಜೆ.ಎನ್.ಕೋಟೆ ಗ್ರಾಮದ 41 ಫಲಾನುಭವಿಗಳಿಗೆ ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಮನೆಗಳ ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡಿದರು.

ಒಂದು ತಿಂಗಳ ಹಿಂದೆ ಜೆ.ಎನ್. ಕೋಟೆ 70 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದ್ದೇನೆ. ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರ ಬಳಿ ಯಾವುದೇ ದಾಖಲೆ ಇರಲಿಲ್ಲ. ಅವರಿಗೆ ದಾಖಲೆ ನೀಡಿ ಆಸ್ತಿ ಹಕ್ಕು ನೀಡಬೇಕೆಂದು ಹಕ್ಕು ಪತ್ರ ವಿತರಿಸಲಾಗುತ್ತಿದೆ. ಕ್ಷೇತ್ರಕ್ಕೆ 2636 ಮನೆಗಳನ್ನು ಮಂಜೂರು ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸುವೆ. ಕೇಂದ್ರದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕ್ಷೇತ್ರಕ್ಕೆ 430 ಮನೆಗಳು ಮಂಜೂರಾಗಿವೆ. ಇವು ಸೇರಿ 3 ಸಾವಿರಕ್ಕೂ ಅಧಿಕ ಮನೆಗಳು ಕ್ಷೇತ್ರಕ್ಕೆ ದೊರೆತಂತಾಗಿವೆ ಎಂದರು.

ತಹಸೀಲ್ದಾರ್ ನಾಗವೇಣಿ ಮಾತನಾಡಿ, 37 ಅರ್ಜಿ ದಾಖಲೆಗಳ ಪರಿಶೀಲನೆಯನ್ನು ಶೀಘ್ರ ಪೂರ್ಣಗೊಳಿಸುವುದಾಗಿ ಹೇಳಿದರು. ಜಾನಕೊಂಡ ಗ್ರಾಪಂ ಅಧ್ಯಕ್ಷೆ ಚಿಂತಾಮಣಿ, ಉಪಾಧ್ಯಕ್ಷ ರಾಮಲಿಂಗಪ್ಪ, ಸದಸ್ಯರಾದ ಮಲ್ಲೇಶ್, ಶಿವಣ್ಣ, ಪಿಡಿಒ ನಿರ್ಮಲಾ, ಶಿರಸ್ತೇದಾರ್ ವಿನೂತಾ, ಗ್ರಾಮ ಆಡಳಿತ ಅಧಿಕಾರಿಗಳಾದ ಪಾಂಡುರಂಗಪ್ಪ, ಅಣ್ಣೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net