

ಆನೇಕಲ್: ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಲು ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯನ ನಡುವೆ ನಡೆದ ಜಗಳದಿಂದ ಸಭೆಯೇ ನಿಲ್ಲಿಸುವಂತಾಯಿತು.
ಆನೇಕಲ್ ನ ಕರ್ಪೂರು ಗ್ರಾಮ ಪಂಚಾಯತಿಯಲ್ಲಿ ಮೊದಲ ಸುತ್ತಿನ ಗ್ರಾಮ ಸಭೆ ಮಂಗಳವಾರ ಆರಂಭಗೊಂಡಿತ್ತು. ಸಭೆಯಲ್ಲೇ ಅಧ್ಯಕ್ಷ ಹಾಗೂ ಸದಸ್ಯ ನಡುವೆ ನಡೆದ ಜಗಳದಿಂದಾದಿ ಸಭೆಯಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ.ಗ್ರಾಮಸಭೆಯಲ್ಲಿ ಅಧ್ಯಕ್ಷ ದಿನ್ನೂರು ರಾಜು ಹಾಗೂ ಸದಸ್ಯ ತಿಮ್ಮರಾಜು ಏಕವಚನದಲ್ಲೇ ಅವಾಚ್ಯ ಶಬ್ದಗಳಿಂದ ಒಬ್ಬರಿಗೊಬ್ಬರು ನಿಂದಿಸಿಕೊಂಡರು.
ಸಾರ್ವಜನಿಕರ ಕುಂದುಕೊರತೆ ಆಲಿಸಲು ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಯಾವುದೇ ಚರ್ಚೆಗಳೇ ಆಗಲಿಲ್ಲ. ಸಮಸ್ಯೆ ಆಲಿಸಿದೇ ಗಲಾಟೆಯಲ್ಲೇ ಸಭೆ ಮುಗಿಯಿತು. ಇನ್ನು ಗ್ರಾಮಸಭೆಯಲ್ಲಿ ಗಲಾಟೆ ಹೆಚ್ಚಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರ ಎದುರಿನಲ್ಲೇ ಏಕವಚನದಲ್ಲಿ ಒಬ್ಬರಿಗೊಬ್ಬರು ಜಗಳವಾಡಿಕೊಂಡರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಸ್ಯರಿಬ್ಬರು ಕೂಡ ಒಂದೇ ಪಕ್ಷದವರು.ಆದರೂ ಗ್ರಾಮ ಸಭೆಯಲ್ಲಿ ಕೋಲಾಹಲ ಎಬ್ಬಿಸಿ ಸಭೆಯೇ ರದ್ದಾಗಲು ಕಾರಣರಾದರು. (ದಿಗ್ವಿಜಯ ನ್ಯೂಸ್)