ಶಂಕರ ಪವಾರ್‌ಗೆ ಕಲ್ಲೂರ ಗ್ರಾಪಂ ಪಟ್ಟ

25hbd3
Published on

ಹುಮನಾಬಾದ್: ಕಲ್ಲೂರ ಗ್ರಾಮ ಪಂಚಾಯಿತಿ ಎರಡನೇ ಅವಧಿ ಅಧ್ಯಕ್ಷರಾಗಿ ಶಂಕರ ಪವಾರ್ ಹಾಗೂ ಉಪಾಧ್ಯಕ್ಷೆಯಾಗಿ ಮಲ್ಲಮ್ಮ ಬಸಗೊಂಡ ಅವಿರೋಧ ಆಯ್ಕೆಯಾಗಿದ್ದಾರೆ. ಗ್ರಾಪಂ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಕ್ರಿಯೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಶಿವಕುಮಾರ ರಾಠೋಡ್ ಅವಿರೋಧ ಆಯ್ಕೆ ಘೋಷಿಸಿದರು. ಸದಸ್ಯರಾದ ವೀರಭದ್ರಪ್ಪ ಪಾಟೀಲ್, ಶಿವರಾಜ ಕೋಲಾರ, ಅಮೃತ ಮರಕುಂದಿ, ಪ್ರಿಯಾಂಕಾ ಸಿ., ಮಂಜುಳಾ ಕಲ್ಲಪ್ಪ, ರಾಜಶ್ರೀ ಆರ್., ಪಾರ್ವತಿ ಆರ್., ಮಹಾನಂದ ಶರಣಪ್ಪ, ತೇಜಮ್ಮ ಕಟ್ಟಿಮನಿ, ಪಾರಮ್ಮ ನೌಲೆ, ಅನೀಲ ಕೊನ್ಹೇರಿ, ಸಂಜುಕುಮಾರ ಕಟ್ಟಿಮನಿ, ರೇವಣಸಿದ್ದ ಮರಕುಂದಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಬಳಿಕ ನಡೆದ ಸಂಭ್ರಮಾಚರಣೆಯಲ್ಲಿ ಬಿಜೆಪಿ ತಾಲೂಕು ಉಪಾಧ್ಯಕ್ಷ ಕರಬಸಪ್ಪ ಭೀಮಶೆಟ್ಟಿ, ಮುಖಂಡರಾದ ಸಂತೋಷ ಪಾಟೀಲ್, ಮಲ್ಲು ಸ್ವಾಮಿ, ಪ್ರಭು ಕಾಮಗೊಂಡ, ಶ್ರೀಮಂತ ದ್ಯಾವನೋರ, ಆಕಾಶ ಭೀಮಶೆಟ್ಟಿ, ರಮೇಶ ಕಿಣಗಿ, ಸಂತೋಷ ಬಿರಾದಾರ, ಸಂಗಮೇಶ ಪಾಟೀಲ್, ಕಾಮಶೆಟ್ಟಿ ಪಾಟೀಲ್, ಅಂಬಣ್ಣ ತೇಲಂಗ, ಚಂದ್ರಕಾಂತ ಜಮಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net