ಚಿಂತಾಕಿ ಗ್ರಾಪಂ ನಾಗಮಾರಪಳ್ಳಿ ಬೆಂಬಲಿಗರ ತೆಕ್ಕೆಗೆ

IMG-20230729-WA0472 (1)
Published on

ಔರಾದ್: ಚಿಂತಾಕಿ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಮರೆಡ್ಡಿ ಕೌಡಾಲೆ ಮತ್ತು ಉಪಾಧ್ಯಕ್ಷರಾಗಿ ಅಶ್ವಿನಿ ಎ. ಅವಿರೋಧವಾಗಿ ಆಯ್ಕೆಯಾದರು. ೨೦ ಸದಸ್ಯ ಬಲದ ಪಂಚಾಯಿತಿಯಲ್ಲಿ ೧೭ ಸದಸ್ಯರು ಹಾಜರಿದ್ದರು. ಉಭಯ ಸ್ಥಾನಗಳಿಗೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಸುಭಾಷ ದಾಲಗೊಂಡೆ ಫಲಿತಾಂಶ ಘೋಷಿಸಿದರು. ಪಿಡಿಒ ಶರಣಪ್ಪ ನಾಗಲಗಿ ಇದ್ದರು. ನಂತರ ವಿಜಯೋತ್ಸವದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಚಿಂತಾಕಿ ಗ್ರಾಪಂ ನಮ್ಮ ಬೆಂಬಲಿಗರ ತೆಕ್ಕೆಗೆ ಬಂದಿರುವುದು ಸಂತಸದ ವಿಷಯ. ಎಲ್ಲ ಸದಸ್ಯರು ಒಮ್ಮತದಿಂದ ಕೆಲಸ ಮಾಡಿ ಅಭಿವೃದ್ಧಿಗೆ ಶ್ರಮಿಸಬೇಕು. ರಾಮರೆಡ್ಡಿ ಕೌಡಾಲೆ ನಿವೃತ್ತ ಶಿಕ್ಷಕರಿದ್ದು, ಅನುಭವಿಗಳು. ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net