ಪರ್ತಾಪುರ ಗ್ರಾಪಂಗೆ ಶೋಭಾ ಸಾರಥ್ಯ

26BK2
Published on

ಬಸವಕಲ್ಯಾಣ: ಪರ್ತಾಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಎಂ.ಶೋಭಾ ಹಾಗೂ ಉಪಾಧ್ಯಕ್ಷರಾಗಿ ಸಂತೋಷ ಎಂ. ಆಯ್ಕೆಯಾಗಿದ್ದಾರೆ. ೨೧ ಸದಸ್ಯ ಬಲದ ಪಂಚಾಯಿತಿ ಎರಡನೇ ಅವಧಿಗಾಗಿ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶೋಭಾ ೧೧ ಮತ ಪಡೆದು ಗೆದ್ದರೆ, ಪ್ರತಿಸ್ಪರ್ಧಿ ಗೋದಾವರಿ ೧೦ ಮತ ಪಡೆದು ಸೋಲೊಪ್ಪಿಕೊಂಡರು. ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸಂತೋಷ ೧೨ ಮತ ಪಡೆದು ಚುನಾಯಿತರಾದರೆ, ಪ್ರತಿಸ್ಪರ್ಧಿ ದಿಗಂಬರ ನಿವರ್ತಿ 9 ಮತ ಸೋತರು. ಚುನಾವಣಾಧಿಕಾರಿಯಾಗಿದ್ದ ತಾಪಂ ಇಒ ಕಿರಣ ಪಾಟೀಲ್ ಫಲಿತಾಂಶ ಪ್ರಕಟಿಸಿದರು. ಪಿಡಿಒ ಪ್ರಿಯದರ್ಶಿನಿ ಇತರರಿದ್ದರು. ನಗರ ಠಾಣೆ ಪಿಎಸ್‌ಐ ಅಮರ ಕುಲಕರ್ಣಿ ಬಂದೋಬಸ್ತ್ ಕಲ್ಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net