

ಸೋಮವಾರಪೇಟೆ: ನೇಪಾಳದ ಕಾಠ್ಮಂಡುವಿನಲ್ಲಿ ನಡೆಯಲಿರುವ ಪ್ರಥಮ ಏಷಿಯನ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಷಿಪ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಜ್ಞಾನಗಂಗಾ ವಸತಿ ಶಾಲೆ ವಿದ್ಯಾರ್ಥಿ ಮನ್ವಿತ್ ಮೋಹನ್ ಅವರಿಗೆ ಐಗೂರು ಗ್ರಾಮ ಪಂಚಾಯಿತಿ ಸಹಾಯಧನ ಚೆಕ್ ವಿತರಿಸಿತು.
ಶುಕ್ರವಾರ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿದ್ಯಾರ್ಥಿಗೆ ಪಂಚಾಯಿತಿ ಅಧ್ಯಕ್ಷ ಬಿ.ಕೆ.ವಿನೋದ್ ಚೆಕ್ ಹಸ್ತಾಂತರಿಸಿದರು. ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಬಾರನ ಪ್ರಮೋದ್, ರಾಜೇಶ್, ಜೋಯಪ್ಪ, ಜುನೈದ್, ಜಾನಕಿ, ಕಾವೇರಿ, ಪಿಡಿಒ ಪೂರ್ಣಕುಮಾರ್ ಇದ್ದರು.