ಮೈಸೂರಿನಲ್ಲಿ ಕೆ.ಆರ್. ನಗರ ತಾಲೂಕಿನ ಗ್ರಾ.ಪಂ. ಸದಸ್ಯ ಸಂಕಾಸ್ಪದ ಸಾವು

sathish
Published on

ಮೈಸೂರು : ಮೈಸೂರು ನಗರದಲ್ಲಿ ಕೆ.ಆರ್.‌ ನಗರ ತಾಲೂಕಿನ ಹಳಿಯೂರು ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಮಂಗಳವಾರ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಹಳಿಯೂರು ಗ್ರಾಮ ಪಂಚಾಯಿತಿಯ ಕಾಂಗ್ರೆಸ್ ಬೆಂಬಲಿತ ಸದಸ್ಯ ಸತೀಶ್ (34) ಮೃತ ವ್ಯಕ್ತಿ. ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಲಿದ್ದು, ಜೆಡಿಎಸ್ ಬೆಂಬಲಿತ ಸದಸ್ಯ ದಿನೇಶ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ದಿನೇಶ್ ತಂಡದೊಂದಿಗೆ ಮೈಸೂರಿನ ಆರ್‌.ಟಿ.ನಗರದ ಸುಭೀಕ್ಷಾ ಗಾರ್ಡನ್ಸ್ ಗೆ ಪಂಚಾಯಿತಿಯ ಇತರೆ ಸದಸ್ಯರೊಂದಿಗೆ ಸತೀಶ್ ಆಗಮಿಸಿದ್ದರು.

ಸತೀಶ್ ಮೃತದೇಹ ಪತ್ತೆಯಾದಾಗ ಅವರ ದೇಹದಲ್ಲಿ ಬಟ್ಟೆ ಇರಲಿಲ್ಲ. ಮೃತದೇಹದ ಪಕ್ಕದಲ್ಲೇ ಮಲಮೂತ್ರ ವಿಸರ್ಜನೆಯಾಗಿದ್ದು, ಈ ಸಾವು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಕಳೆದ 20 ದಿನಗಳಿಂದ ದಿನೇಶ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಒಟ್ಟು ಗೂಡಿ ಕಳೆದ 20 ದಿನಗಳಿಂದ ರಾಜ್ಯ ಪ್ರವಾದಲ್ಲಿ ಇದ್ದು, ಸೋಮವಾರ ರಾತ್ರಿ ಮೈಸೂರಿಗೆ ಆಗಮಿಸಿದ್ದರು. ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು ‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net