ನವಲಿ ಗ್ರಾಪಂಗೆ ಮಹಾದೇವಮ್ಮ ಅಧ್ಯಕ್ಷೆ, ನಾಗರಾಜ ಉಪಾಧ್ಯಕ್ಷ

ELECTION
ನವಲಿ ಗ್ರಾಪಂಗೆ ಆಯ್ಕೆಯಾದ ಅಧ್ಯಕ್ಷೆ, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ವಿರುಪಣ್ಣ ಕಲ್ಲೂರು, ಸಿದ್ದನಗೌಡ ಮಾ.ಪಾ., ಜಡಿಯಪ್ಪ ಭೋವಿ, ಜಡಿಯಪ್ಪ ಸಂಕನಾಳ, ಹನುಮನಗೌಡ, ಜ್ಯೋತೆಮ್ಮ ಆದಾಪುರ, ಶೇಖರಪ್ಪ ಆದಾಪುರ ಇತರರಿದ್ದರು.
Published on

ಕನಕಗಿರಿ: ತಾಲೂಕಿನ ನವಲಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಶನಿವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮಹಾದೇವಮ್ಮ ಆದಾಪುರ ಅಧ್ಯಕ್ಷೆಯಾಗಿ, ನಾಗರಾಜ ತಳವಾರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 25 ಸದಸ್ಯ ಬಲದ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನವು ಸಾಮಾನ್ಯ(ಮಹಿಳೆ), ಉಪಾಧ್ಯಕ್ಷ ಸ್ಥಾನವು ಎಸ್ಟಿಗೆ ಮೀಸಲಾಗಿತ್ತು. ಮಹಾದೇವಮ್ಮ ಆದಾಪುರ ಹಾಗೂ ಈಶ್ವರಮ್ಮ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರೆ, ನಾಗರಾಜ ತಳವಾರ ಹಾಗೂ ಭೋಗಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದರು.

ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಾದೇವಮ್ಮಗೆ 15 ಮತಗಳು ಬಿದ್ದಿದ್ದರೆ, ಪ್ರತಿಸ್ಪರ್ಧಿ ಈಶ್ವರಮ್ಮರಿಗೆ 10 ಮತಗಳು ಲಭಿಸಿದವು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗರಾಜ ತಳವಾರಗೆ 14 ಮತಗಳು ಚಲಾವಣೆಗೊಂಡಿದ್ದರೆ, ಭೋಗಪ್ಪರಿಗೆ 11 ವೋಟು ಬಿದ್ದಿದ್ದು, ಕ್ರಮವಾಗಿ ಮಹಾದೇವಮ್ಮ, ನಾಗರಾಜ ತಳವಾರ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿರೂಪಾಕ್ಷಪ್ಪ ಘೋಷಿಸಿದರು. ಕಾಂಗ್ರೆಸ್ ಬೆಂಬಲಿಗರು ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net