ದುದ್ದ ಗ್ರಾಪಂಗೆ ಅಧ್ಯಕ್ಷರಾಗಿ ಪದ್ಮಾ ಆಯ್ಕೆ

1 (3)
Published on

ಮಂಡ್ಯ: ತಾಲೂಕಿನ ದುದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸದಸ್ಯೆ ಪದ್ಮಾ ಅವರು ಅವಿರೋಧವಾಗಿ ಆಯ್ಕೆಯಾದರು.

13 ಸದಸ್ಯ ಬಲದ ಗ್ರಾಪಂಗೆ ಅಧ್ಯಕ್ಷರಾಗಿದ್ದ ಭಾಗ್ಯಮ್ಮ ಕೆಲ ದಿನದ ಹಿಂದೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಗ್ರಾಪಂ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಪದ್ಮಾ ಅವರನ್ನು ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಶಂಕರ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷರನ್ನು ಉಪಾಧ್ಯಕ್ಷ ಶ್ರೇಯಸ್‌ಗೌಡ, ಸದಸ್ಯರಾದ ರಾಮಚಂದ್ರು, ಯಶೋದಮ್ಮ, ಭಾಗ್ಯಮ್ಮ, ಶ್ವೇತಾ, ಬಸಮಣ್ಣಿ, ಬಸವಲಿಂಗಪ್ಪ ಅಭಿನಂದಿಸಿದರು. ಪಿಡಿಒ ಶಿವಲಿಂಗೇಗೌಡ, ಮುಖಂಡರಾದ ಮಹೇಶ್, ಮಹದೇವಪ್ಪ, ಕಾಳಪ್ಪ, ಬಸವಣ್ಣ, ಮೋಹನ್, ಲೋಕೇಶ್, ಶಿವಣ್ಣ, ಗುರುಪ್ರಸಾದ್, ರಾಜಣ್ಣ, ಗುರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net