ಕಾರ್ಯಕರ್ತರ ಗೆಲ್ಲಿಸುವುದೇ ಗುರಿ

MADHU BANGARAPPA-NEW
Published on

ಸೊರಬ: ಗ್ರಾಮ ಪಂಚಾಯಿತಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದು ನನ್ನ ಸೋಲು ಗೆಲುವಿನಲ್ಲಿ ಭಾಗಿಯಾಗಿರುವ ಕಾರ್ಯಕರ್ತರನ್ನು ಚುನಾವಣೆಯಲ್ಲಿ ಗೆಲ್ಲಿಸುವುದೇ ಗುರಿಯಾಗಿದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.

ತಾಲೂಕಿನ ಶಕುನವಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬೆಂಬಲಿಗರಿಗೆ ಹಾಗೂ ಕಾರ್ಯಕರ್ತರಿಗೆ ಸ್ಥಾನಮಾನ ಕಲ್ಪಿಸುವುದು ನಾಯಕರ ಗುಣವಾಗಿದ್ದು ಈ ಹಿಂದೆ ತಾಲೂಕಿನ 41 ಗ್ರಾಪಂಗಳಲ್ಲಿ ಬಹುಪಾಲು ಗ್ರಾಪಂ ಅಧಿಕಾರವನ್ನು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವುದರ ಮೂಲಕ ಅಧಿಕಾರ ಹಿಡಿಯಲಾಗಿತ್ತು. ಅದರಂತೆ ಮುಂಬರುವ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರೇ ಗೆಲ್ಲುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಮುಖಂಡರ ಜತೆ ರ್ಚಚಿಸಿ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ಜಿಪಂ ಸದಸ್ಯ ಶಿವಲಿಂಗೇಗೌಡ, ತಾಪಂ ಮಾಜಿ ಅಧ್ಯಕ್ಷ ಸದಾನಂದ ಗೌಡ, ಜೆಡಿಎಸ್ ವಕ್ತಾರ ಎಂ.ಡಿ.ಶೇಖರ್, ಎಪಿಎಂಸಿ ಅಧ್ಯಕ್ಷ ಜೈಶೀಲಪ್ಪ, ಈರಪ್ಪ, ಮೋಹನ ಗೌಡ, ಬಸವಂತಪ್ಪ ಕೋಟೆ, ಕೃಷ್ಣಮೂರ್ತಿ ನಾಡಿಗ್, ರಾಮಚಂದ್ರ, ಮಂಜುನಾಥ್ ಮೇಷ್ಟ್ರು ತವನಂದಿ, ರಾಮಣ್ಣ ತೆಲಗುಂದ, ಶಂಕರಪ್ಪ, ಮಂಜು ತಲಗಡ್ಡೆ ಇದ್ದರು.ರ ವಿಧಾನಸಭಾ ಕ್ಷೇತ್ರಕ್ಕೆ ತಾಲೂಕು ಮಾನ್ಯತೆ ನೀಡಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net