ಜಿಲ್ಲೆಯ 26 ಗ್ರಾಪಂಗೆ ಚುನಾವಣೆ: ನ.23ರಂದು ಮತದಾನ ಪ್ರಕ್ರಿಯೆ

election
Published on

ಮಂಡ್ಯ: ವಿವಿಧ ಕಾರಣಗಳಿಂದ ಜಿಲ್ಲೆಯ 26 ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿರುವ ಸದಸ್ಯ ಸ್ಥಾನಕ್ಕೆ ನ.23ರಂದು ಚುನಾವಣೆ ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.
ಮಂಡ್ಯ ತಾಲೂಕಿನ ಕೀಲಾರ ಗ್ರಾಪಂ, ಕೆರಗೋಡು, ಹುಲಿವಾನ, ಯಲಿಯೂರು, ಮದ್ದೂರು ತಾಲೂಕಿನ ಕೆಸ್ತೂರು, ಸೋಮನಹಳ್ಳಿ, ವಳಗೆರೆಹಳ್ಳಿ, ಗೊರವನಹಳ್ಳಿ, ಕೆ.ಶೆಟ್ಟಹಳ್ಳಿ, ಮಳವಳ್ಳಿ ತಾಲೂಕಿನ ಕಂದೇಗಾಲ, ಚಿಕ್ಕಮೂಲಗೂಡು, ಬೆಳಕವಾಡಿ, ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ, ನಾರಾಯಣಪುರ, ಕನಗನಮರಡಿ, ಡಿಂಕಾ, ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ, ಟಿ.ಎಂ.ಹೊಸೂರು, ಬೆಳಗೊಳ, ಕೆ.ಶೆಟ್ಟಿಹಳ್ಳಿ, ನಾಗಮಂಗಲ ತಾಲೂಕಿನ ಹೊಣಕೆರೆ, ಅರಣಿ, ಕದಬಹಳ್ಳಿ ಮತ್ತು ಕೆ.ಆರ್.ಪೇಟೆ ತಾಲೂಕಿನ ಬಳ್ಳೇಕೆರೆ, ಗಂಜಿಗೆರೆ, ಸೋಮನಹಳ್ಳಿ ಗ್ರಾಪಂನಲ್ಲಿ ಖಾಲಿ ಇರುವ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ನ.6ರಂದು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಲಿದ್ದಾರೆ. ನಾಮಪತ್ರ ಸಲ್ಲಿಸಲು 12 ಕೊನೆ ದಿನವಾಗಿದ್ದು, 13ರಂದು ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು 15 ಕೊನೆ ದಿನವಾಗಿದ್ದು, ಅಗತ್ಯವಿದ್ದರೆ ನ.23ರಂದು ಮತದಾನ ಪ್ರಕ್ರಿಯೆ ಇರಲಿದೆ. ಅಂತೆಯೇ ಆಯಾಯ ತಾಲೂಕು ಕೇಂದ್ರದಲ್ಲಿ ನ.26ರಂದು ಮತ ಎಣಿಕೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net