

ಬಸವಾಪಟ್ಟಣ: ಅಸ್ಪೃಶ್ಯತೆ ಹೆಚ್ಚಾಗಿದ್ದ ಕಾಲದಲ್ಲಿ ಛಲದಿಂದ ಶಿಕ್ಷಣ ಪಡೆದು ಸಾಧಿಸಿ, ಸಂವಿಧಾನ ಎಂಬ ಅದ್ಭುತ ಪುಸ್ತಕ ಬರೆದು ಕೋಟ್ಯಂತರ ಜನರ ಹಣೆಬರಹವನ್ನೇ ಬದಲಾಯಿಸಿದ ಅಂಬೇಡ್ಕರ್ ಬದುಕು ಜಗತ್ತಿಗೆ ಸ್ಪೂರ್ತಿ ಮತ್ತು ದೊಡ್ಡ ಸಂದೇಶ ಎಂದು ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಹಾಲೇಶಪ್ಪ ಹೇಳಿದರು.
ಸಮೀಪದ ಚಿರಡೋಣಿಯ ಗ್ರಾಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಸಮಾನತೆ ಹಾಗೂ ಭ್ರಾತೃತ್ವ ಭಾವನೆ ಮೂಲಕ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನ ಸ್ಥಾನಮಾನ ಕಲ್ಪಿಸಿಕೊಟ್ಟ ದಿವ್ಯ ಶಕ್ತಿ ಅಂಬೇಡ್ಕರ್ ಎಂದರು.
ಗ್ರಾಪಂ ಉಪಾಧ್ಯಕ್ಷ ಎಂ.ಎ. ಗೋಪಾಲ್ ರಾವ್ ಮಾತನಾಡಿದರು. ಪಿಡಿಒ ಆರ್. ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಚ್.ಆರ್. ತಿಪ್ಪೇಸ್ವಾಮಿ, ಸದಸ್ಯರಾದ ಜಿ.ಎಸ್. ಶೇಖರಪ್ಪ ಗೌಡ, ಶಾಮನೂರಪ್ಪ, ಜ್ಯೋತಿ ಸದಾಶಿವಪ್ಪ, ಕಂಪ್ಯೂಟರ್ ಆಪರೇಟರ್ ಸುರೇಶ್, ಬಿಲ್ ಕಲೆಕ್ಟರ್ ರಾಜಪ್ಪ, ಅಟೆಂಡರ್ ಸಿ.ಎನ್. ಪ್ರದೀಪ್, ನೀರಗಂಟಿ ಎಸ್.ಎಸ್. ಮಂಜುನಾಥ್, ರೂಪಾ, ದೀಪಾ, ವೇದಾವತಿ, ಎಸ್.ಸಿ. ರವಿ ಇದ್ದರು.