ಗ್ರಾಪಂ 5 ವರ್ಷಗಳ ಸಾಧನೆ ಪುಸ್ತಕ ಬಿಡುಗಡೆ

6.npk-2
ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಯಿಂದ ಪಂಚಾಯಿತಿ ವಿಶೇಷ ಸಾಧನೆ , ಕೆಲಸ ಕಾರ್ಯಗಳ ಮಾಹಿತಿಯನ್ನು ಒಳಗೊಂಡ ಮುನ್ನೋಟ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಬಿ.ಎಸ್.ಕುಶನ್ ರೈ, ಚಂದ್ರಮೌಳಿ, ಬಿ ಎಸ್ ರೇಖಾ ಬಾಲು, ಮುಂಡಂಡ ವಿಜು ತಿಮ್ಮಯ್ಯ, ಅಪ್ಪಚಂಡ ಮೀನಾಕ್ಷಿ ದೇವಯ್ಯ, ಮುಡೇರ ಶರ್ಮಿಳಾ ಮನು, ಎಂ.ಎನ್.ಪುಷ್ಪ, ಮುಂಡಂಡ ಪವಿ ಸೋಮಣ್ಣ , ಎಚ್.ಎನ್.ನಿಂಗಪ್ಪ, ಬಿ.ಎಸ್.ಕೃಷ್ಣಪ್ಪ, ಯಶ್ವಿನ್ ಪೊನ್ನಪ್ಪ, ಎಚ್. ಎಸ್.ರಾಜೇಶ್, ಪಾರೆಮಜುಲು ರೀತ ಸುದರ್ಶನ್, ಮುಕ್ಕಾಟಿರ ಸೌಮ್ಯಾ ಸತೀಶ್, ಎಂ.ವೈ.ಲತಾ ಇತರರು ಇದ್ದರು.
Published on

ನಾಪೋಕ್ಲು: ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವಿಶೇಷ ಸಾಧನೆ, ಕೆಲಸ ಕಾರ್ಯಗಳ ಮಾಹಿತಿಯನ್ನು ಒಳಗೊಂಡ ಮುನ್ನೋಟ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಬಿ.ಎಸ್.ಕುಶನ್ ರೈ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮುನ್ನೋಟ ಪುಸ್ತಕ ಅನಾವರಣಗೊಳಿಸಲಾಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಮಾತನಾಡಿ, 2020-21ರಿಂದ 2025-26ನೇ ಸಾಲಿನಲ್ಲಿ ಅತ್ಯುತ್ತಮ ಸಮಾಜಮುಖಿ ಕೆಲಸಗಳನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತರಲಾಗಿದೆ. ಈ ಬಾರಿಯ ಸದಸ್ಯರೆಲ್ಲರೂ ಒಗ್ಗಟಾಗಿ ಎಲ್ಲರೂ ಒಂದೇ ಮನಸ್ಸಿನಿಂದ ನಿಸ್ವಾರ್ಥವಾಗಿ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.

ಕೊಡಗಿನ ಪಂಚಾಯಿತಿಗಳಲ್ಲಿ ಇದೇ ಮೊದಲ ಬಾರಿಗೆ ಪಂಚಾಯಿತಿ ಐದು ವರ್ಷಗಳ ಸಾಧನೆ ಕಾರ್ಯವನ್ನು ಬರವಣಿಗೆ ರೂಪದಲ್ಲಿ ಪಾರದರ್ಶಕವಾಗಿ ಹಾಗೂ ಎಲ್ಲ ಸಮುದಾಯದ ಜನರಿಗೆ ಅನುಕೂಲವಾಗುವಂತೆ ಸಮಾಜಮುಖಿ ಕೆಲಸಗಳನ್ನು ಮಾಡಿ 22 ಪುಟಗಳ ಮುನ್ನೋಟ ಪುಸ್ತಕವನ್ನು ಸಾರ್ವಜನಿಕರಿಗೆ ಮುಂದಿನ ಗ್ರಾಮಸಭೆಯಲ್ಲಿ ವಿತರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಉಪಾಧ್ಯಕ್ಷ ಬಿ ಎಸ್ ರೇಖಾ ಬಾಲು, ಸದಸ್ಯರಾದ ಮುಂಡಂಡ ವಿಜು ತಿಮ್ಮಯ್ಯ, ಅಪ್ಪಚಂಡ ಮೀನಾಕ್ಷಿ ದೇವಯ್ಯ, ಮುಡೇರ ಶರ್ಮಿಳಾ ಮನು, ಎಂ.ಎನ್.ಪುಷ್ಪ, ಮುಂಡಂಡ ಪವಿ ಸೋಮಣ್ಣ , ಎಚ್.ಎನ್.ನಿಂಗಪ್ಪ, ಬಿ.ಎಸ್.ಕೃಷ್ಣಪ್ಪ, ಯಶ್ವಿನ್ ಪೊನ್ನಪ್ಪ, ಎಚ್. ಎಸ್.ರಾಜೇಶ್, ಪಾರೆಮಜುಲು ರೀತ ಸುದರ್ಶನ್, ಮುಕ್ಕಾಟಿರ ಸೌಮ್ಯಾ ಸತೀಶ್, ಎಂ.ವೈ.ಲತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net