ಧಾನ್ಯದ ಕಿಟ್ ವಿತರಣೆ

01
Published on

ತೆಲಸಂಗ: ಗ್ರಾಮದಲ್ಲಿ ರಂಜಾನ್ ನಿಮಿತ್ತ ಸೋಮವಾರ ಅಮನ್ ಮುಸ್ಲಿಂ ಯಂಗ್ ಕಮಿಟಿ ವತಿಯಿಂದ ಬಡವರಿಗೆ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು. ಮುಸ್ಲಿಂ ಯುವ ಮುಖಂಡ ಅಸ್ಕರ್ ಮುಜಾವರ್ ಮಾತನಾಡಿ, ನಮ್ಮ ಬದುಕಿನೊಂದಿಗೆ ಇತರರಿಗೆ ಒಳಿತು ಮಾಡುವುದೇ ನಿಜವಾದ ಇಸ್ಲಾಂ ಧರ್ಮ.

ಇಂತಹ ಇಸ್ಲಾಂ ಧರ್ಮದಲ್ಲಿ ಜನಿಸಿದ ನಾವೆಲ್ಲ ಸಕಲ ಮಾನವ ಕುಲದ ಏಳಿಗಾಗಿ ಶ್ರಮಿಸಿ, ಅಲ್ಲಾಹನ ಕೃಪೆಗೆ ಪಾತ್ರರಾಗೋಣ ಎಂದರು. ಅಮನ್ ಮುಸ್ಲಿಂ ಯಂಗ್ ಕಮಿಟಿಯ ಶಕೀಲ್ ಮುಜಾವರ, ಆದಂ ಮುಜಾವರ, ಇಲಾಯ್ ಮುಜಾವರ್, ಅಸ್ಕರ್ ಮುಜಾವರ್, ಬುರಾನ್ ಅರಟಾಳ, ಆಸೀಫ್ ಮುಜಾವರ್, ಮದಾರ ಅರಟಾಳ, ಸಲೀಂ ಅಫರಾಜರ್, ನಾಸೀರ್ ಮುಜಾವರ್, ನಜೀರ ಮುಜಾವರ್, ಯಾಕೂಬ್ ಅರಟಾಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net