ಪದವಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ: ಕುಲಪತಿ ಪ್ರೋ.ಬಿ.ಕೆ.ರವಿ ಅನಿಸಿಕೆ

ald
ಕೊಪ್ಪಳ ವಿಶ್ವವಿದ್ಯಾಲಯ ಕಛೇರಿಯಲ್ಲಿ ಕುಲಪತಿ ಪ್ರೋ.ಬಿ.ಕೆ.ರವಿ ಅಳವಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಬುಧವಾರ ಅಭಿನಂದನೆ ಸಲ್ಲಿಸಿದರು.
Published on

ಅಳವಂಡಿ: ಗ್ರಾಮೀಣ ಭಾಗದಲ್ಲಿ ಅಭ್ಯಾಸಗೈದು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೋ.ಬಿ.ಕೆ.ರವಿ ಹೇಳಿದರು.


ಅಳವಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಇತ್ತೀಚಿಗೆ ತುಮಕೂರಿನಲ್ಲಿ ನಡೆದ ಮಾಧ್ಯಮ ಹಬ್ಬದ ಎರಡು ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ವಿಶ್ವ ವಿದ್ಯಾಲಯದ ಕಛೇರಿಗೆ ಬುಧವಾರ ಆಹ್ವಾನಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಾ ಪತ್ರಿಕೋದ್ಯಮ ವಿಷಯದ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವುದು ಸುಲಭವಲ್ಲ. ಇದು ಕಾಲೇಜಿನ ಬೋಧಕ ಸಿಬ್ಬಂದಿಯ ಕಾರ್ಯ ಕ್ಷಮತೆಗೆ ಹಿಡಿದ ಕೈಕನ್ನಡಿಯಾಗಿದೆ ಎಂದರು. ವಿಶ್ವ ವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವರಾದ ಪ್ರೋ,ಕೆ.ವಿ.ಪ್ರಸಾದ್, ಯುವರಾಜ, ಪ್ರಾಚಾರ್ಯ ಡಾ.ಗವಿಸಿದ್ದಪ್ಪ ಮುತ್ತಾಳ, ಉಪನ್ಯಾಸಕರಾದ ಬಸವರಾಜ ಕರುಗಲ್, ವಿಜಯಕುಮಾರ ಕುಲಕರ್ಣಿ, ರವಿ ಹಿರೇಮಠ, ಗ್ರಂಥಪಾಲಕಿ ಗೌತಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net