ಸರ್ಕಾರ ದಿಂದ ಪದವೀಧರರಿಗೆ ಅನುಕೂಲ

cm siddaramaiah
ಸಿಎಂ ಸಿದ್ದರಾಮಯ್ಯ
Published on

ಮೈಸೂರು: ಲೋಕಸಭೆ ಚುನಾವಣೆಯಲ್ಲಿ ಈ ಭಾಗದ ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ.ಲಕ್ಷ್ಮಣ್ ಹಾಗೂ ಸುನಿಲ್ ಬೋಸ್ ಅವರನ್ನು ಗೆಲ್ಲಿಸಲು ಜಿಲ್ಲಾ ಕಾಂಗ್ರೆಸ್ ಶಿಕ್ಷಕರು ಹಾಗೂ ಪದವೀಧರ ಘಟಕದ ವತಿಯಿಂದ ಸಹಕಾರ ನೀಡಲಾಗುತ್ತದೆ ಘಟಕದ ಅಧ್ಯಕ್ಷ ಕುಬೇರಪ್ಪ ತಿಳಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದ ಕಾರ್ಯಕ್ರಮಗಳಿಂದ ಲಾಭ ಪಡೆದಿರುವ ರಾಜ್ಯದ ಪದವೀಧರರು ಹಾಗೂ ಶಿಕ್ಷಕ ನೌಕರರು ಕಾಂಗ್ರೆಸ್ ಬೆಂಬಲಿಸಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖಂಡರಾದ ಎಸ್.ರಾಘವೇಂದ್ರ, ಗ್ರಾಮಾಂತರ ಅಧ್ಯಕ್ಷ ರಮೇಶ್, ಡಾ.ಎನ್.ಆರ್.ಸುರೇಶ್, ಡಾ.ಪ್ರೀತಮ್, ಮಾಜಿ ಮೇಯರ್ ಮೋದಾಮಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net