ಪದವೀಧರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ

4knk2
ಕನಕಗಿರಿ ತಾಲೂಕಿನ ಚಿರ್ಚನಗುಡ್ಡಾ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ತಾಪಂ ಇಒ ಚಂದ್ರಶೇಖರ ಕಂದಕೂರು ಭೇಟಿ ನಿಡಿ ಮಾತನಾಡಿದರು. ತಾಲೂಕು ಐಇಸಿ ಸಂಯೋಜಕ ಕೆ.ಶಿವಕುಮಾರ್, ತಾಂತ್ರಿಕ ಸಹಾಯಕ ಕೋಟ್ರೆಶ್ ಜವಳಿ, ಬಿ.ಎಫ್.ಟಿ ಪ್ರಕಾಶ್ ನಾಯ್ಕ ಇತರರಿದ್ದರು.
Published on

ಕನಕಗಿರಿ: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ನ.6 ಕೊನೆ ದಿನವಾಗಿದ್ದು, ಎಲ್ಲ ಪದವೀಧರರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಬೇಕೆಂದು ತಾಪಂ ಇಒ ಚಂದ್ರಶೇಖರ ಕಂದಕೂರು ಕರೆ ನೀಡಿದರು.

ತಾಲೂಕಿನ ಚಿಕ್ಕಡಂಕನಕಲ್ ಗ್ರಾ.ಪಂಯಿಂದ ಚಿರ್ಚನಗುಡ್ಡಾ ಗ್ರಾಮದಲ್ಲಿ ಕೂಲಿಕಾರರಿಗೆ ಕೆಲಸ ನೀಡಿದ ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು. ಪದವಿ ಮುಗಿಸಿದ ಸಾಕಷ್ಟು ಯುವಕ-ಯುವತಿಯರು ಹಳ್ಳಿಗಳಲ್ಲಿದ್ದು, ಅಂತವರು ಕಡ್ಡಾಯವಾಗಿ ನ.6 ರೊಳಗೆ ತಹಶೀಲ್ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಲು ತಿಳಿಸಿದರು.

ಕಡ್ಡಾಯವಾಗಿ ಎಲ್ಲರೂ ಅಳತೆನುಸಾರವಾಗಿ ಕೆಲಸ ಮಾಡಿ ಪೂರ್ತಿ ಕೂಲಿ ಹಣ ಪಡೆಯಲು ತಿಳಿಸಿ, ಎನ್.ಎಂ.ಆರ್‌ನಲ್ಲಿ ಇರುವ ಕೂಲಿಕಾರರೇ ಕೆಲಸಕ್ಕೆ ಹಾಜರಾಗಬೇಕು. ಅವರ ಬದಲಿ ಯಾರು ಕೆಲಸಕ್ಕೆ ಬರುವಂತಿಲ್ಲ ಎಂದರು.

ಗ್ರಾ.ಪಂ ಪಿಡಿಓ ಹನುಮಂತಪ್ಪ, ಸದಸ್ಯರಾದ ನಿರುಪಾದಿ ಚಿರ್ಚನಗುಡ್ಡ, ನಿರುಪಾದಿ ಚಿಕ್ಕಡಂಕನಕಲ್, ತಾಂತ್ರಿಕ ಸಂಯೋಜಕ ಸಯ್ಯದ್ ತನ್ವೀರ್, ತಾಲೂಕು ಐಇಸಿ ಸಂಯೋಜಕ ಕೆ.ಶಿವಕುಮಾರ್, ತಾಂತ್ರಿಕ ಸಹಾಯಕ ಕೋಟ್ರೆಶ್ ಜವಳಿ, ಬಿ.ಎಫ್.ಟಿ ಪ್ರಕಾಶ್ ನಾಯ್ಕ, ಗ್ರಾಮ ಕಾಯಕ ಮಿತ್ರ ರಾಜೇಶ್ವರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net