

ಮೂಡಲಗಿ: ಹಿಡಿದ ಕೆಲಸ ಬಿಡದೆ ಸತತ ಪ್ರಯತ್ನ ಮಾಡಿದರೆ ಗುರಿ ಸಾಧಿಸಬಹುದು ಎಂದು ಉಪನ್ಯಾಸಕ ಬಿ.ಸಿ.ಹೆಬ್ಬಾಳ ಹೇಳಿದರು.
ಪಟ್ಟಣದ ಆರ್‌ಡಿಎಸ್ ಕಲಾ, ವಾಣಿಜ್ಯ, ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಎ, ಬಿಕಾಂ, ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಎನ್‌ಎಸ್‌ಎಸ್ ಸ್ಕೌಟ್ಸ್ ಘಟಕಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಪನ್ಯಾಸಕ ಶಾನೂರ ಐಹೊಳೆ, ಆರ್‌ಡಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಂತೋಷ ಪಾರ್ಸಿ ಮಾತನಾಡಿದರು.
ಹಾರೂಗೇರಿಯ ಗಂಗಾರಾಮ ಪದವಿ ಕಾಲೇಜಿನ ಅಧ್ಯಕ್ಷ ಶ್ರೀಧರ ಆಜೂರೆ, ಪ್ರಾಚಾರ್ಯ ಸತೀಶ ಗೋಟೂರೆ, ಶಿವಾನಂದ ಸತ್ತಿಗೇರಿ, ಉಪನ್ಯಾಸಕಿ ಅಕ್ಷತಾ ಹೊಸಮನಿ, ಉಪನ್ಯಾಸಕರಾದ ಸಂಗಮೇಶ ಕುಂಬಾರ, ಸಂಜೀವ ಮಂಟೂರ ಇತರರಿದ್ದರು.