ಹೊಸ ಸಂಶೋಧನೆಗಳತ್ತ ಗಮನಹರಿಸಲಿ

Untitled design(14)
Published on

ಗಂಗಾವತಿ: ನಗರದ ತಾಲೂಕಾಡಳಿತ ಸೌಧದಲ್ಲಿ ತಾಲೂಕು ಆಡಳಿತದಿಂದ ರಾಷ್ಟ್ರೀಯ ವಿಜ್ಞಾನ ದಿನ ಶುಕ್ರವಾರ ಆಚರಿಸಲಾಯಿತು. ಸಿಬ್ಬಂದಿಗೆ ಪ್ರತಿಜ್ಞಾವಿಧಿಬೋಧಿಸಿದ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಮಾತನಾಡಿ, ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವನೆ ಬೆಳೆಸಿಕೊಳ್ಳುವುದು ಸಂವಿಧಾನದ ಮೂಲ ಕರ್ತವ್ಯಗಳಲ್ಲಿ ಒಂದಾಗಿದ್ದು, ಹೊಸ ಸಂಶೋಧನೆಗಳತ್ತ ಗಮನಹರಿಸಬೇಕಿದೆ ಎಂದರು. ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಕೃಷ್ಣವೇಣಿ,ಪ್ರಕಾಶ ನಾಯಕ, ಶ್ರೀಕಂಠೇಶ, ಪವನಕುಮಾರ, ಗಾಯತ್ರಿ, ಕವಿತಾ, ನಾಗರತ್ನಮ್ಮ, ಮಹೇಶ ದಲಾಲ್, ಶ್ರೀರಾಮ್‌ಜೋಶಿ, ಹಾಲೇಶ ಇತರರದ್ದರು.

ಲಿಟಲ್ ಹಾರ್ಟ್ಸ್ ಶಾಲೆ: ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲೂ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ಪ್ರಸಿದ್ಧ ವಿಜ್ಞಾನಿ ಸಿ.ವಿ.ರಾಮನ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ನಂತರ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಜಗನ್ನಾಥ ಆಲ್ಲಂಪಲ್ಲಿ ಮಾತನಾಡಿ, ವಿಜ್ಞಾನಿ ಸಿ.ವಿ.ರಾಮನ್ ಸಂಶೋಧಿಸಿದ ರಾಮನ್ ಎೆಕ್ಟ್‌ಗೆ ಜಾಗತಿಕ ಮಟ್ಟದ ಮನ್ನಣೆ ದೊರೆತಿದ್ದು, ನೊಬಲ್ ಪಾರಿತೋಷಕ ಪಡೆದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ ಎಂದರು. ಮುಖ್ಯಶಿಕ್ಷಕಿ ಎಂ.ಪ್ರಿಯಾಕುಮಾರಿ, ಶಿಕ್ಷಕ ನೀಲಕಂಠಪ್ಪ ಅರಹುಣಸಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net