ಮನರೇಗಾ ನೂನತ್ಯ ಸರಿ ಪಡಿಸಲು ಗ್ರಾಕೂಸ್ ಪ್ರತಿಭಟನೆ

RAICHUR
RAICHUR
Published on

 ರಾಯಚೂರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮ ಗಾಂಽ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ನಿರ್ವಹಿಸುವ ಕೂಲಿಕಾರರಿಗೆ ಯೋಜನೆಯ ಅನುಷ್ಠಾನದಲ್ಲಿ ಆಗುತ್ತಿರುವ ನ್ಯೂನ್ಯತೆಗಳ ಸರಿಪಡಿಸುವಂತೆ ಗ್ರಾಕೂಸ್ ಸಂಘದಿAದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.

೧೦೦ ದಿನಗಳ ನಿರಂತರ ಕೆಲಸ ಒದಗಿಸಬೇಕು. ಕಾಮಗಾರಿಯ ಕೈಗೊಂಡ ಕೆಲಸಕ್ಕೆ ಅನುಗುಣವಾಗಿ ಕೂಲಿ ಪಾವತಿಸಬೇಕು. ಕಾಮಗಾರಿ ಮುಗಿದ ತಕ್ಷ ಪಾವತಿಸಬೇಕು. ಮಹಾತ್ಮ ಗಾಂಽ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದಿನಕ್ಕೆ ೨ ಬಾರಿ ಎನ್‌ಎಂಎAಎಸ್ ಮೂಲಕ -ÉÇÃಟೊ ಸೇರಿ ಹಿಡಿಯುತ್ತಿದ್ದು ಸದರಿ ಸಮಯದಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳಿಂದ ಸೇರೆ ಹಿಡಿಯದೇ ಇದ್ದಲ್ಲಿ ಅಂದಿನ ಹಾಜರಾತಿಯು ಎಂಐಎಸ್‌ನಲ್ಲಿ ಗೈರು ಹಾಜರಾಗುತ್ತಿದ್ದು ಇದರಿಂದ ಕೆಲಸ ನಿರ್ವಹಿಸಿದ ಕೂಲಿ ಕಾರ್ಮಿಕರಿಗೆ ಮತ್ತೊಮ್ಮೆ ಕೆಲಸ ಸ್ಥಳಕ್ಕೆ ಹೋಗಿ ಎನ್‌ಎಂಎAಎಸ್‌ನಲ್ಲಿ -ÉÇÃಟೋ ತೆಗೆಸಿಕೊಳ್ಳುವಂತಾಗಿದೆ.

ಈ ರೀತಿ ತೊಂದರೆಯಾಗುವುದರಿAದ ರದ್ದುಪಡಿಸಬೇಕು ಎಂದರು. ಕಾಲುವೆ ಅಥವಾ ನಾಲ ಹೂಳೆತ್ತುವ ಕಾಮಗಾರಿಗಳು ಸುಮಾರು ೨-೩ ಕಿ.ಮೀ. ವರೆಗೆ ಹೂಳೆತ್ತಿ ಪುನಃ ಹಾಜರಾತಿಗಾಗಿ ಕಾಮಗಾರಿ ಪ್ರಾಂರಭದ ಸ್ಥಳಕ್ಕೆ ಬಂದು ನಿಲ್ಲಬೇಕಾದ ಪರಿಸ್ಥಿತಿ ಇದೆ ಕಾಮಗಾರಿ ನಿರ್ವಹಿಸುವ ಸ್ಥಳದಲ್ಲೇ -ÉÇÃಟೋ ತೆಗೆಯಲು ಅವಕಾಶ ಕಲ್ಪಿಸಿ ಕೊಡಬೇಕು. ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನೆರಳಿನ ವ್ಯವಸ್ಥೆ ಕಲ್ಪಿಸಿ ಕೊಡುವುದು. ಹಾಜರಾತಿಗಾಗಿ ಕಾಲಕಾಲಕ್ಕೆ ಹೊಸ ತಂತ್ರಾAಶಗಳು ಬರುತ್ತಿದ್ದು ಸದರಿ ತಂತ್ರಾAಶಗಳ ಕುರಿತು ಮೇಟ್‌ಗಳಿಗೆ ಮತ್ತು ಕೂಲಿಕಾರ್ಮಿಕರಿಗೆ ಸೂಕ್ತ ಮಾಹಿತಿ ಒದಗಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಶಿಘ್ರವೇ ಈಡೇರಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕರ ಜಿಲ್ಲಾಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ,ಕೃಷ್ಣಾ ಪ್ರಸಾದ್,ಗೋವಿಂದು,ಮಲ್ಲಮ್ಮ,ಕೊAಡಯ್ಯ ಚನ್ನಬಸವ,ಗುರುರಾಜ,ರಮೇಶ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net