

ಊರಿಗೆ ತೆರಳಲು ನಗರ ಬಸ್ ನಿಲ್ದಾಣಕ್ಕೆ ಬಂದಿದ್ದ ಅತಿಥಿ ಉಪನ್ಯಾಸಕರೊಬ್ಬರ ಮೊಬೈಲ್ ಅನ್ನು ದುಷ್ಕರ್ಮಿಯೋರ್ವ ಕಸಿದು ಪರಾರಿಯಾಗಿದ್ದಾನೆ.
ನಂಜನಗೂಡು ಅತಿಥಿ ಉಪನ್ಯಾಸಕ ಜಿ.ಎಂ.ಮನು ಮೊಬೈಲ್ ಕಳೆದುಕೊಂಡವರು. ಮೇ 28 ರಂದು ನಗರ ಬಸ್ ನಿಲ್ದಾಣಕ್ಕೆ ಸುತ್ತೂರು ಮಾರ್ಗವಾಗಿ ತೆರಳುವ ಬಸ್‌ಗಾಗಿ ಕಾಯುತ್ತಾ ನಿಂತಿದ್ದರು. ಬಸ್ ಬಂದ ನಂತರ ಹತ್ತಲು ಮುಂದದಾಗ ಅವರ ಕೈಲಿದ್ದ 10 ಸಾವಿರ ರೂ. ಮೌಲ್ಯದ ಮೊಬೈಲನ್ನು ದುಷ್ಕರ್ಮಿಯೋರ್ವ ಕಸಿದು ಪರಾರಿಯಾಗಿದ್ದಾನೆ ಎಂದು ದೂರು ನೀಡಿದ್ದಾರೆ.
ಈ ಸಂಬಂದ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.