ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ

mkg1a
Published on

ಚನ್ನಗಿರಿ: ಹಾಡುಹಗಲೇ ಮನೆಯ ಕಿಟಕಿಗಳನ್ನು ಕತ್ತರಿಸಿ ಮನೆಯಲ್ಲಿದ್ದ ಚಿನ್ನ, ಹಣ ದೋಚಿಕೊಂಡು ಪರಾರಿಯಾದ ಘಟನೆ ಪಟ್ಟಣದ ಮಣ್ಣಮ್ಮ ಪದವಿ ಕಾಲೇಜು ಹಿಂಭಾಗದ ಮನೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಮಣ್ಣಮ್ಮ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಬಿ. ಸಿದ್ದೇಶ್ವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಕಾರ್ಯನಿಮಿತ್ತ ಕುಟುಂಬಸ್ಥರು ಬುಧವಾರ ಬೆಳಗ್ಗೆ ದಾವಣಗೆರೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿದ್ದನ್ನು ಗಮನಿಸಿದ ಕಳ್ಳರು ಮಧ್ಯಾನ್ಹ ಕಿಟಕಿ ಸರಳು ಮುರಿದು ಒಳನುಗ್ಗಿ 400 ಗ್ರಾಂ ಚಿನ್ನ, 1.5 ಲಕ್ಷ ರೂ. ನಗದನ್ನು ದೋಚಿದ್ದಾರೆ.
ಸಂಜೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಡಾ. ಸಂತೋಷ್, ಸಿಪಿಐ ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net