ಗ್ರಾ.ಪಂ. ಉಪಚುನಾವಣೆ ದಿನಾಂಕ ನಿಗದಿ

Lokayukta Justice B.S. Patil's tour
ಹಣಮಾಪುರದಲ್ಲಿ ಯರೋಗ ಪತ್ತೆ ಆಂದೋಲನ ನಡೆಯಿತು. ಆರ್​.ಎಂ. ಗೌಡರ, ಅಲ್ಲಮಪ್ರಭು ಕಾಪಸೆ, ಎಲ್​.ಎಲ್​. ಕಟಗಿ, ಎಂ. ಎಸ್​. ಕೊಲ್ಹಾರ, ಜಗದೀಶ ಬಿ., ಎಸ್​.ಎಚ್​.ಬಿಂಗಿ, ಸವಿತಾ ದೊಡ್ಡಮನಿ ಇದ್ದರು
Published on

ವಿಜಯಪುರ : ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಿಗೆ ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಅವರು ವೇಳಾಪಟ್ಟಿಯನ್ನು ನಿಗದಿಪಡಿಸಿದ್ದಾರೆ.

ನಿಡಗುಂದಿ ತಾಲೂಕಿನ ಆಲಮಟ್ಟಿ ಗ್ರಾಪಂನ ಅರಳದಿನ್ನಿ ಹಾಗೂ ಚಿಮ್ಮಲಗಿ ಗ್ರಾಮ ಪಂಚಾಯತಿಯ ಚಿಮ್ಮಲಗಿ ಪು.ಕೆ. ೇತ್ರಕ್ಕೆ, ಇಂಡಿ ತಾಲೂಕಿನ ಸಾಲೋಟಗಿ ಹಾಗೂ ಖೇಡಗಿ ಗ್ರಾಪಂ , ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮ ಪಂಚಾಯಿತಿಯ ನಾಗರಾಳ ಹುಲಿ, ಮುತ್ತಗಿ ಹಾಗೂ ಬ್ಯಾಕೋಡ ಗ್ರಾಮ ಪಂಚಾಯತಿಯ ಜಯವಾಡಗಿ ೇತ್ರಕ್ಕೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ ಗ್ರಾಪಂಯ ಕಾತ್ರಾಳ ೇತ್ರಕ್ಕೆ, ವಿಜಯಪುರ ತಾಲೂಕಿನ ಕನ್ನೂರ, ನಾಗಠಾಣ, ಜುಮನಾಳ ಹಾಗೂ ಹೊನಗನಹಳ್ಳಿ ಗ್ರಾಪಂಗೆ, ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಪಂಗೆ, ತಾಳಿಕೋಟೆ ತಾಲೂಕಿನ ಹಿರೂರ ಗ್ರಾಮ ಪಂಚಾಯತಿಯ ತಮದಡ್ಡಿ, ಚಡಚಣ ತಾಲೂಕಿನ ಲೋಣಿ ಬಿ.ಕೆ. ಮತ್ತು ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮ ಪಂಚಾಯತಿಯ ಒಂದು ಸ್ಥಾನಕ್ಕೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಉಪಚುನಾವಣೆ ವೇಳಾಪಟ್ಟಿಯಂತೆ ನಾಮಪತ್ರಗಳನ್ನು ಸಲ್ಲಿಸಲು ನ. 12 ರಂದು ಕೊನೆಯ ದಿನಾಂಕ, ನ. 13 ರಂದು ನಾಮಪತ್ರಗಳ ಪರಿಶೀಲನೆ, ನ. 15 ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನ, ನ. 23 ರಂದು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net