

ವಿಜಯವಾಣಿ ಸುದ್ದಿಜಾಲ ಗದಗ
ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕರಣ ಬಿಡಿಸಲಾಗದ ಕಗ್ಗಂಟಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ ಮೆಟ್ಟಿಲೇರಿ ಮೂರು ವರ್ಷ ಕಳೆದರೂ ಬಗೆಹರಿಯದ ಈ ಪ್ರಕರಣದಿಂದ ಶಾಲಾ ಶಿಕ್ಷಕರ ಹೊಸ ನೇಮಕಾತಿಗೂ ಈ ಪ್ರಕರಣ ತಡೆಗೋಡೆ ಮಾರ್ಪಟ್ಟಿದೆ. ಇತ್ತೀಚೆಗೆ ಬಜೆಟ್ ನಲ್ಲಿ "ಶಿಕ್ಷಕರ ನೇಮಕಾತಿಯನ್ನು ತರ್ಕಬದ್ಧಗೊಳಿಸಿ ನೇಮಕ ಮಾಡಿಕೊಳ್ಳುವುದು' ಎಂದು ಸಿಎಂ ಸಿದ್ಧರಾಮಯ್ಯ ಬಜೆಟ್ ಪ್ರಸ್ತಾಪಿಸಿದ್ದರು. ಈ ಪ್ರಸ್ತಾಪದಿಂದ ಸುಪ್ರೀಂ ಕೋರ್ಟ ತೀಪಿರ್ನನ್ನು ಅನುಸರಿಸಿ ರಾಜ್ಯ ಸರ್ಕಾರ ಹೊಸ ನೇಮಕಾತಿಗೆ ಅಧಿಸೂಚನೆ ಹೊರಡಿಸುತ್ತದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ಹಾಗಾಗಿ ಸುಪ್ರೀಂ ಕೋರ್ಟ್ ತೀಪಿರ್ನತ್ತ ಶಿಕ್ಷಣ ಇಲಾಖೆ ಅಧಿಕಾರಿಗಳ ಮತ್ತು ಅಭ್ಯಥಿರ್ಗಳ ಚಿತ್ತ ನೆಟ್ಟಿದೆ. ಆದರೆ, ಸುಪ್ರೀಂ ಕೋರ್ಟನಲ್ಲಿ ಪ್ರಕರಣ ದಾಖಲಾಗಿ ಮೂರು ವರ್ಷ ಕಳೆದರೂ ವಿಚಾರಣೆಗೆ ಬಾರದ ಹಿನ್ನೆಲೆ ಪ್ರಕರಣ ಕಗ್ಗಂಟಾಗಿ ಪರಿಣಮಿಸಿದೆ.
ಹಿನ್ನೆಲೆ ಏನು?
2021 -22ರ ಅಧಿಸೂಚನೆ ಅಡಿಯಲ್ಲಿ ನೇಮಕ ಗೊಂಡಿದ್ದ 13500 ಅಬ್ಯಥಿರ್ಗಳ ಪೈಕಿ 3000ಕ್ಕೂ ಅಧಿಕ ಅಭ್ಯಥಿರ್ಗಳ ದಾಖಲೆಗೆ ಸಂಬಂಧಿಸಿದಂತೆ ಅಭ್ಯಥಿರ್ಗಳು ಮೂರು ವರ್ಷಗಳ ಹಿಂದೆಯೇ ಸುಪ್ರೀಂ ಕೊರ್ಟ್ ಮೆಟ್ಟಿಲೇರಿದ್ದರು. ಸಿಂದುತ್ವ ರ್ಪೂಣಗೊಂಡ ಭಾಗಶಃ ಅಭ್ಯಥಿರ್ಗಳಿಗೆ ನೇಮಕಾತಿ ಪತ್ರವನ್ನು ನೀಡುವಂತೆ ಸುಪ್ರೀಂ ಕೋರ್ಟ ಮಧ್ಯಂತರ ಆದೇಶ ನೀಡಿತ್ತು. ಇನ್ನೂಳಿದಂತೆ ಸರಿ ಸುಮಾರ 500 ಅಭ್ಯಥಿರ್ಗಳ ದಾಖಲೆ ಸಲ್ಲಿಕೆಗೆ ಸಂಬಂಧಿಸಿದಂತೆ ವಿಚಾರಣೆ ಬಾಕಿ ಇದೆ. ಆದರೆ, ಕಳೆದೆರೆಡೂ ವರ್ಷದಿಂದ ಪ್ರಕರಣ ವಿಚಾರಣೆಗೆ ಬರುತ್ತಿಲ್ಲ. ಹಾಗಾಗಿ ಎರಡೂ ಬದಿಯ ಆಕಾಂ ಅಭ್ಯಥಿರ್ಗಳು ವಕೀಲರ ಶುಲ್ಕವನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಒಂದುವರೆ ವರ್ಷದಿಂದ ಈ ಪ್ರಕರಣ ಗೊಂದಲ ಗೂಡಾಗಿ ಪರಿವರ್ತನೆ ಆಗುತ್ತಿದೆ. ಶಿಕ್ಷಣ ಇಲಾಖೆಯ ಮುತುವಜಿರ್ ಕುಂಠಿತಗೊಳ್ಳುತ್ತಿರುವುದು ಮೇಲ್ನೊಟಕ್ಕೆ ಸಾಭಿತಾಗುತ್ತಿದೆ.
ಪ್ರಕರಣದ ಒಳತಿರುಳು:
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 15000 ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. 13500 ಕ್ಕೂ ಅಧಿಕ ಅಭ್ಯಥಿರ್ಗಳು ನೇಮಕಗೊಂಡಿದ್ದರು. ಅದರಲ್ಲಿ 3000 ಕ್ಕೂ ಅಧಿಕ ಅಭ್ಯಥಿರ್ಗಳ ದಾಖಲೆಗೆ ಸಂಬಂಧಿಸಿದಂತೆ ಗೊಂದಲ ಏರ್ಪಟ್ಟಿತ್ತು. ವಿವಾಹಿತೆಯ ನೇಮಕಾತಿಗೆ ಸಂಬಂಧಿಸಿದಂತೆ ಪತಿಯ ಆದಾಯ ಪ್ರಮಾಣ ಪತ್ರ ಪರಿಗಣಿಸಬೇಕೇ? ಅಥವಾ ತಂದೆ ಆದಾಯ ಪ್ರಮಾಣ ಪತ್ರ ಪರಿಗಣಿಸಬೇಕೇ? ಎಂಬ ಪ್ರಕರಣ ಇದಾಗಿದೆ. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಮುರು ವರ್ಷ ಕಳೆಯಿತು.
====
ನಿಯಮವೇನು?
ಸಿಅಂಡಆರ್ ನಿಯಮಗಳ ಪ್ರಕಾರ ಚಾಲ್ತಿಯಲ್ಲಿ ಇರುವ ನೇಮಕಾತಿ ಪ್ರಕ್ರಿಯೆ(ಡಿಪಿಎಆರ್)ಪ್ರಕಾರ ಅಭ್ಯಥಿರ್ಗಳ ಪ್ರಮಾಣ ಪತ್ರ ಪಡೆಯಬೇಕು ಎಂಬ ನಿಯಮವಿದೆ. ಕೆಎಎಸ್, ಪಿಡಿಓ, ಗ್ರಾಮ ಲೆಕ್ಕಾದಿಕಾರಿ ಸೇರಿದಂತೆ ಇತರೆ ನೇಮಕಾತಿಗೂ ಸಿಟಂಡ್ಆರ್ ನಿಯಮಗಳ ಅಡಿಯಲ್ಲಿ ನೇಮಕಾತಿ ಜರುಗಿಸಲಾಗಿದೆ. ಪ್ರಕರಣದಲ್ಲಿನ ಗೊಂದಲದಿಂದ ಸಪ್ರಕರಣವು ಸುಪ್ರೀಂಕೋರ್ಟ ಮೆಟ್ಟಿಲೇರಿದ ಕಾರನ ಇತ್ತೀಚಿನ ಕೆಸೆಟ್ ಸೇರಿದಂತೆ ಹಲವು ನೇಮಕಾತಿಗಳಲ್ಲಿ ವಿವಾಹಿತೆ ಯಾರ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು ಸ್ಪಷ್ಟವಾಗಿ ನಮೂದಿಸಿ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ.
ಸಾಧ್ಯತೆ ಏನು:
ರಾಜ್ಯದಲ್ಲಿ 20 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆ ಖಾಲಿ ಇವೆ. ಈ ಪ್ರಕರಣದಲ್ಲಿ ಕೇವಲ ಸರಿಸುಮಾರ 500ಕ್ಕಿಂತ ಕಡಿಮೆ ಅಭ್ಯಥಿರ್ಗಳ ದಾಖಲೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಯಬೇಕಿದೆ. ಈ ಹಿಂದೆ ಕೆಲ ಪ್ರಕರಣಗಳಲ್ಲಿ ನಿಯಮಾವಳಿಗಳಲ್ಲಿನ ಕೆನೆಪದರ ಬದಿಗಿಟ್ಟು ಒನ್ ಟೈಮ್ ಸೆಟ್ಲಮೆಂಟ್ ಪ್ರಕಾರ ಎಲ್ಲರಿಗೂ ಅವಕಾಶ ನೀಡಲಾಗಿದೆ. ಹಾಗಾಗಿ, ಸರ್ಕಾರ ಮಧ್ಯಸ್ಥಿಕೆ ವಹಿಸಿ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಎಲ್ಲರಿಗೂ ಅವಕಾಶ ನೀಡಿದರೂ ಒಳಿತು ಎಂದು ಶಿಕ್ಷಣ ತಜ್ಞರ ಅಭಿಪ್ರಾಯ ಕೇಳಿವರುತ್ತಿದೆ
====
ಕೋಟ್:
ಈ ಪ್ರಕರಣ ವಿಚಾರಣೆಗೆ ಲಿಸ್ಟ್ ನಲ್ಲಿ ಬರುತ್ತಿದೆ. ಆದರೆ ವಿಚಾರಣೆ ಆಗುತ್ತಿಲ್ಲ. ಆರಂಭದಲ್ಲಿ ಸರ್ಕಾರದ ಪರ ವಕೀಲು ಹಾಜರಾಗದ ಹಿನ್ನೆಲೆ ವಿಚಾರಣೆ ಕೈಗೆತ್ತಿಕೊಂಡಿರಲಿಲ್ಲ. ಆದರೆ, ಸಿಂದುತ್ವ ರ್ಪೂಣಗೊಂಡು ತಡೆಯಾಜ್ಞೆ ಹಿನ್ನೆಲೆ ನೇಮಕಾತಿ ಪಡೆಯದ ಸಾಮಾನ್ಯ ಅಭ್ಯಥಿರ್ಗಳಿಗೆ ನೇಮಕಾತಿ ಆದೇಶ ನೀಡಿದ ನಂತರ ಇನ್ನೂಳಿದ ಅಭ್ಯಥಿರ್ಗಳ ಬಗ್ಗೆ ವಿಚಾರಣೆ ಕೈಗೆತ್ತಿಕೊಳ್ಳುತ್ತಿಲ್ಲ. ರಾಜ್ಯ ಸರ್ಕಾರದ ವಿಳಂಬ ನೀತಿಯಿಂದ ಸಾವಿರಾರು ಅಭ್ಯಥಿರ್ಗಳಿಗೆ ತೊಂದರೆ ಆಗುತ್ತಿದೆ. ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರದ ಎಲ್ಲ ನೇಮಕಾತಿಗಳಿಗೆ ಒಂದು ನಿಯಮ, ಶಿಕ್ಷಕರ ನೇಮಕಾತಿಗೆ ಮತ್ತೊಂದು ನಿಯಮ ಏಕೆ ಎಂಬ ಪ್ರಶ್ನೆ ಕಾಡುತ್ತಿದೆ.
ಲೀಲಾವತಿ ಎಂ ಸುಪ್ರೀಂ ಕೋರ್ಟ್ನಲ್ಲಿ ಅಜಿರ್ದಾರರು
ಕೋಟ್:
ಶಿಕ್ಷಕರ ನೇಮಕಾತಿ ಪ್ರಕರಣದಲ್ಲಿ ದೊಡ್ಡ ತಾಂತ್ರಿಕ ಸಮಸ್ಯೆ ಇಲ್ಲ. ಸರ್ಕಾರ ಮಧ್ಯಸ್ಥಿಕೆ ವಹಿಸಿ ಪ್ರಕರಣ ಇತ್ಯರ್ಥಗೊಳಿಸಲು ಮುಂದಾಗಬೇಕು. ಇಲ್ಲವಾದರೆ ಮುಂದಿನ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ತಡವಾಗುತ್ತದೆ. ಪ್ರಕರಣ ವಿಳಂಭದಿಂದ ನೇಮಕಾತಿಗೆ ಇರುವ ಅಬ್ಯಥಿರ್ಗಳ ವಯೋಮಿತಿ ಮೀರುತ್ತದೆ. ಇದರಿಂದ ಮತ್ತೊಂದು ನ್ಯಾಯಾಂಗ ಸಂರ್ಷಕ್ಕೆ ಕಾರಣ ಆಗುತ್ತದೆ. ಶಿಕ್ಷರ ಮೇಲೆ ಈ ರಾಜ್ಯದಲ್ಲಿ ಅಪಾರ ಗೌರ ಇದೆ. ಸರ್ಕಾರದ ಜತೆಗೂ ಈ ಪ್ರಕರಣ ಬಗ್ಗೆ ಹಲವು ಬಾರಿ ಚಚಿರ್ಸಿದ್ದೇವೆ. ಸರ್ಕಾರ, ಶಿಕ್ಷಣ ಇಲಾಖೆ ಈ ಪ್ರಕರಣದಲ್ಲಿ ಆಸಕ್ತಿ ತೋರಬೇಕು.
- ಬಸವರಾಜ ಹೊರಟ್ಟಿ, ಸಭಾಪತಿ