ಹಿಂದುಳಿದ ಬಡಾವಣೆಗಳನ್ನು ಅಭಿವೃದ್ದಿಪಡಿಸಲಾಗುವುದು

08-GPT-1
Published on

ಗುಂಡ್ಲುಪೇಟೆ : ನಾನಾ ಇಲಾಖೆಗಳ ವಿಶೇಷ ಅನುದಾನದಲ್ಲಿ ಪಟ್ಟಣದ ಹಿಂದುಳಿದ ಬಡಾವಣೆಗಳನ್ನು ಅಭಿವೃದ್ದಿಪಡಿಸಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದ ಮಹದೇವಪ್ರಸಾದ್ ನಗರ ಬಡಾವಣೆಯಲ್ಲಿ 3 ಲಕ್ಷ ರೂ ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕ್ಷೇತ್ರಕ್ಕೆ ಅಲ್ಪಸಂಖ್ಯಾತರ ಇಲಾಖೆಯ ವತಿಯಿಂದ 5 ಕೋಟಿ ಅನುಧಾನ ತಂದಿದ್ದು ವಿಶೇಷ ಹಣದಲ್ಲಿ ಮಹದೇವಪ್ರಸಾದ್ ನಗರ, ಜಾಕೀರ ಹುಸೇನ್ ನಗರ, ತಾಲೂಕಿನ ಕಗ್ಗಳದಹುಂಡಿ ಹಾಗೂ ತೆರಕಣಾಂಬಿ ಗ್ರಾಮಗಳನ್ನು ಒಳಗೊಂಡಂತೆ 5 ಕೋಟಿ ರೂ ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ವಾರ್ಡ್ ಗಳ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸಾಜಿದಾ ಬೇಗಂ, ರಾಜಗೋಪಾಲ. ಹೆಚ್.ಆರ್.ಇಲಿಯಾಸ್, ಎನ್.ಕುಮಾರ್, ಕಣ್ಣಪ್ಪ, ಮುಖ್ಯಾಧಿಕಾರಿ ವಸಂತ ಕುಮಾರಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net