ಹಸಿ ಶುಂಠಿ ಖರೀದಿ ಪ್ರಕ್ರಿಯೆ ಆರಂಭ

30-JULY-GPT-4 ginger
Published on

* ಸರ್ಕಾರದಿಂದಲೇ ಬೆಂಬಲ ಬೆಲೆ ನಿಗದಿ

ವಿಜಯವಾಣಿ ಸುದ್ದಿಜಾಲ ಗುಂಡ್ಲುಪೇಟೆ

ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್) ಅಡಿಯಲ್ಲಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಸಿ ಶುಂಠಿ ಖರೀದಿ ಪ್ರಕ್ರಿಯೆ ಮಂಗಳವಾರದಿಂದ ಆರಂಭವಾಗಿದೆ.

ಮಾರುಕಟ್ಟೆಯಲ್ಲಿ ಶುಂಠಿಯ ಬೆಲೆಕುಸಿತವಾಗಿದೆ. ಪ್ರತಿ ಕೆಜಿ ಶುಂಠಿಯ ಬೆಲೆ 10 ರೂಪಾಯಿಗೆ ಇಳಿದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಅರಿಶಿಣ ಬೆಳಗಾರರ ಒಕ್ಕೂಟವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜೊತೆ ವ್ಯವಹರಿಸಿ ಶುಂಠಿ ಬೆಳೆಗೆ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ‘ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ’ ಯನ್ನು ಜಾರಿ ಮಾಡಿಸಿದೆ. ಇದರಿಂದ ಸರ್ಕಾರವೇ ಕ್ವಿಂಟಾಲ್ ಹಸಿ ಶುಂಠಿಗೆ ಬೆಂಬಲ ಬೆಲೆಯನ್ನು (2,445 ರೂ) ನಿಗದಿಪಡಿಸಿ ರೈತರಿಂದ ನೇರ ಖರೀದಿ ಆರಂಭಿಸಿದೆ. ಬೆಳೆಗಾರರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಎಪಿಎಂಸಿ ಕಾರ್ಯದರ್ಶಿ ಶ್ರೀಧರ್ ತಿಳಿಸಿದ್ದಾರೆ.   ಕಾರ್ಯದರ್ಶಿ ಶ್ರೀಧರ್, ರವೀಂದ್ರ, ನಾಗಾರ್ಜುನ ಕುಮಾರ್, ಚಂದ್ರು ತೆರಕಣಾಂಬಿ, ಶ್ರೇಯಸ್, ಮಧು, ಶಶಿಕುಮಾರ್, ಮಂಜುನಾಥ್ ದಡದಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net