

ಗುಂಡ್ಲುಪೇಟೆ : ಬೇಗೂರು ನಾಡಕಚೇರಿಯ ಗ್ರಾಮ ಲೆಕ್ಕಾಧಿಕಾರಿ ಸಿ.ಮಹದೇವಪ್ಪ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಆದೇಶಪತ್ರ ನೀಡಿದ ನಂತರ ಅಭಿಮಾನಿಗಳು, ಹಿತೈಷಿಗಳು ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಗಿರೀಗೌಡ, ತಾಲೂಕು ಅಧ್ಯಕ್ಷ ಎಚ್.ಎಸ್.ಪ್ರಸಾದ್, ರಾಜ್ಯ ಪರಿಷತ್ ಸದಸ್ಯ ರುದ್ರಸ್ವಾಮಿ, ಕಂದಾಯ ಇಲಾಖೆಯ ಜಿಲ್ಲಾಧ್ಯಕ್ಷ ಆರ್.ಉಲ್ಲಾಸ್, ಜವರೇಗೌಡ ಹಾಗೂ ಇತರರು ಇದ್ದರು. ಮಹದೇವಪ್ಪ ಅವರು ಗುಂಡ್ಲುಪೇಟೆ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.