ನರೇಗಾ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ

10 GJD 1
ಗಜೇಂದ್ರಗಡ ತಾಲೂಕಿನ ರಾಂಪುರ ಗ್ರಾಪಂ ವ್ಯಾಪ್ತಿಯ ಪುರ್ತಗೇರಿ ಗ್ರಾಮದ ಶಾಲೆ ಕಾಂಪೌಂಡ್ ನಿರ್ಮಾಣ ಕಾಮಗಾರಿಯ ದಾಖಲೆಗಳನ್ನು ಜಿಪಂ ಸಿಇಒ ಡಾ. ಸುಶೀಲಾ ಬಿ. ಪರಿಶೀಲಿಸಿದರು.
Published on

ಗಜೇಂದ್ರಗಡ: ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಜಿಪಂ ಸಿಇಒ ಡಾ. ಸುಶೀಲಾ ಬಿ. ಸೋಮವಾರ ಪರಿಶೀಲಿಸಿದರು.

ಗ್ರಾಮದ ಶಾಲಾ ಕಾಂಪೌಂಡ್, ಆಟದ ಮೈದಾನ, ಗೋಗೇರಿ ಗ್ರಾಪಂ ವ್ಯಾಪ್ತಿಯ ಮಾಟರಂಗಿ ಗ್ರಾಮ ಕೆರೆ ಅಭಿವೃದ್ಧಿ ಕಾಮಗಾರಿ, ಪುರ್ತಗೇರಿ ಶಾಲೆ ಮೈದಾನದ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ತಾಪಂ ಇಒ ಬಸವರಾಜ ಬಡಿಗೇರ, ಪಿಡಿಒ ಅಮರೇಶ ಮೂಲಿಮನಿ, ಶರಣಪ್ಪ ನರೇಗಲ್, ಎಸ್.ಬಿ. ಕಡಬಲಕಟ್ಟಿ, ತಾಂತ್ರಿಕ ಸಂಯೋಜಕಿ ಪ್ರಿಯಾಂಕಾ ಅಂಗಡಿ, ಐಇಸಿ ಸಂಯೋಜಕ ಮಂಜುನಾಥ ಹಳ್ಳದ, ನವೀನ ಬಸರಿ, ಪ್ರವೀಣ ದೂಳಣ್ಣನವರ, ಚಂದ್ರಕಾಂತ ಲಮಾಣಿ, ರವಿ ಹೊಂಬಳ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net