ಜಿಪಿಎಲ್ ಅಂಡರ್ ಆರ್ಮ್ ಪ್ರೀಮಿಯರ್ ಲೀಗ್ ಸೀಸನ್ 4 ಕ್ರಿಕೆಟ್ ಪಂದ್ಯಾವಳಿ

mng--10 may GPL cricket
Published on

ಮಂಗಳೂರು: ಡಾ.ಪಿ. ದಯಾನಂದ ಪೈ, ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ರಥಬೀದಿ ಮಂಗಳೂರು ಇಲ್ಲಿನ ಜಿಪಿಎಲ್ ಅಂಡರ್ ಆರ್ಮ್ ಪ್ರೀಮಿಯರ್ ಲೀಗ್ ಸೀಸನ್-4 ಎರಡು ದಿನಗಳ ಕ್ರಿಕೆಟ್ ಲೀಗ್ ಪಂದ್ಯ ಎಕ್ಕೂರು ಮೈದಾನದಲ್ಲಿ ನಡೆಯಿತು


ಕಾಲೇಜಿನ ಪ್ರಾಂಶುಪಾಲ ಡಾ.ಜಯಕಾರ್ ಭಂಡಾರಿ ಅವರು ವಿಜೇತ್ ತಂಡಗಳಿಗೆ ಬಹುಮಾನ ವಿತರಿಸಿದರು. ಕ್ರಿಕೆಟ್ ಲೀಗ್ ಪಂದ್ಯಕೂಟದ ವಿಜೇತರಾಗಿ ಟೀಮ್ ಎಂವಿ ಪಿಎಕ್ಸ್ ನಾಯಕ ಅಖಿಲೇಶ್ ಮತ್ತು ಮಾಲೀಕ ಮಿತೇಶ್ ಅವರು ಪ್ರಶಸ್ತಿಯನ್ನು ಹಾಗೂ 20 ಸಾವಿರ ರೂ. ನಗದು ಬಹುಮಾನ ಗಳಿಸಿರುತ್ತಾರೆ. ದ್ವಿತೀಯ ಸ್ಥಾನವನ್ನು ಟೀಮ್ ಕ್ರಿಯೇಟಿವ್ ನಾಯಕ ಚಂದ್ರಕಾಂತ ಹಾಗೂ ತಂಡದ ಮಾಲೀಕ ರಾಹುಲ್ ಅವರು 10 ಸಾವಿರ ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಗಳಿಸಿದ್ದಾರೆ.


ಬೆಸ್ಟ್ ಬ್ಯಾಟ್ಸ್ ಮ್ಯಾನ್ ಆಗಿ ಅಖಿಲೇಶ್, ಬೆಸ್ಟ್ ಬೌಲರಾಗಿ ಪ್ರತಿಕ್ಷಿತ್, ಬೆಸ್ಟ್ ವಿಕೆಟ್ ಕೀಪರ್ ಆಗಿ ನವೀಶ್, ಬೆಸ್ಟ್ ಆಲ್ ರೌಂಡರ್ ಆಗಿ ವಿಜೇಶ್ ಪ್ರಶಸ್ತಿ ಗಳಿಸಿದ್ದಾರೆ. ಸಂಯೋಜಕ ಅಮೃತ್ ನಿಹಾಲ್,ಅಖಿಲೇಶ್, ಮಿತೇಶ್ ಸುಶಾಂತ್ ನಿಕೇಶ್ ,ಲಾವಿಶ್ ಸನತ್, ಕಿಶನ್ ,ಬ್ರಿಜೇಶ್, ಕವನ್, ಗೌತಮ್ ಅವರು ಪ್ರಾಂಶುಪಾಲರನ್ನು ಗೌರವಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಶುಭಾ ಕೆ.ಎಚ್ ಮತ್ತು ಕ್ರೀಡಾ ಕಾರ್ಯದರ್ಶಿ ಜ್ಞಾನೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net