ವಳಲಂಕೆ ಫೈಟರ್ಸ್ ಮೂಲ್ಕಿ ತಂಡಕ್ಕೆ ಜಿಪಿಎಲ್ ಟ್ರೋಫಿ

gggggg
Published on




ಮಂಗಳೂರು : ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ 8ನೇ ವರ್ಷದ ಜಿಪಿಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ವಳಲಂಕೆ ಫೈಟರ್ಸ್ ಮೂಲ್ಕಿ ತಂಡಕ್ಕೆ ಅಗ್ರ ಪ್ರಶಸ್ತಿ ಪಡೆಯಿತು. ರಾಯಲ್ ಚಾಲೆಂಜರ್ಸ್ ಬಳ್ಳಂಬೆಟ್ಟು ತಂಡ ದ್ವಿತೀಯ ಸ್ಥಾನಿಯಾಯಿತು.
ವಳಲಂಕೆ ಫೈಟರ್ಸ್ ತಂಡದ ಪಂಚಮ್ ಭಟ್ ಪಂದ್ಯಶ್ರೇಷ್ಠ ಹಾಗೂ ಸರಣಿಯ ಅತ್ಯುತ್ತಮ ಬೌಲರ್ , ಜಿಆರ್‌ಎಸ್ ಮೈಸೂರ್
ವಾರಿಯರ್ಸ್ ತಂಡದ ದಿಪೇಶ್ ಶೆಣೈ ಅತ್ಯುತ್ತಮ ಬ್ಯಾಟ್ಸ್‌ಮನ್, ರಕ್ಷಿತ್ ಶೆಣೈ ಸರಣಿಯ ಉದಯೋನ್ಮುಖ ಆಟಗಾರ ಪುರಸ್ಕಾರ ಸ್ವೀಕರಿಸಿದರು. ವಿಜೇತ ತಂಡದ ವಿಘ್ನೇಶ್ ಭಟ್ ಅವರಿಗೆ ಪೈ ಸೇಲ್ಸ್ ಪ್ರಾಯೋಜಿತ ಅವನೈರ್ ಸುಜುಕಿ ಮೋಟಾರ್ ಬೈಕ್ ನೀಡಿ ಗಣಪತಿ ಪೈ ಮತ್ತು ಅರುಣ್ ಪೈ ಅಭಿನಂದಿಸಿದರು. ಜಿಆರ್‌ಎಸ್ ಮೈಸೂರ್ ವಾರಿಯರ್ಸ್ ತಂಡ ದ್ವೀತಿಯ ರನ್ನರ್ ಅಪ್ ಪ್ರಶಸ್ತಿ ಪಡೆಯಿತು.
ವಿಶೇಷ ಚೇತನ ಹುಡುಗರ ಕ್ರಿಕೆಟ್ ಪಂದ್ಯಾಟದಲ್ಲಿ ಮಂಗಳೂರು ಸೂಪರ್ ಕಿಂಗ್ಸ್ ಪ್ರಥಮ ಹಾಗೂ ಕುಡ್ಲ ಟೈಗರ್ಸ್ ದ್ವಿತೀಯ ಸ್ಥಾನ ಪಡೆದವಯ.
ಜಿಎಸ್‌ಬಿ ಬ್ಯಾಡ್ಮಿಂಟನ್ ಲೀಗ್‌ನ ಮಾಲಸಿ ತಂಡ ಪ್ರಥಮ, ಬ್ಯಾಡ್ಮಿಂಟನ್ ಬುಲ್ ತಂಡ ದ್ವಿತೀಯ ಹಾಗೂ ರೈಸಿಂಗ್ ಸ್ಟಾರ್ ಮಂಗಳೂರು ತಂಡ ತೃತೀಯ ಸ್ಥಾನ ಪಡೆದವು ಸಮಾರೋಪ ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಕೊಡಿಯಾಲ್ ಸ್ಪೋಟ್ಸ್ ಅಸೋಸಿಯೇಶನ್ ಅಧ್ಯಕ್ಷ ಶಿವಾನಂದ ಶೆಣೈ, ಉದ್ಯಮಿಗಳಾದ ವಾಸುದೇವ ಕಾಮತ್, ಅನಂತ ಕಾಮತ್, ಗಣಪತಿ ಪೈ, ಅರುಣ್ ಪೈ, ರಾಘವೇಂದ್ರ ಕುಡ್ವ, ಪ್ರಮುಖರಾದ ಹನುಮಂತ ಕಾಮತ್, ಸಿಎ ಜಗನ್ನಾಥ ಕಾಮತ್, ಸಂದೇಶ್ ಕಾಮತ್, ನರಸಿಂಹ ಕಾಮತ್, ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು ಉಪಸ್ಥಿತರಿದ್ದರು. ಕಿರಣ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net