ಗ್ರಾಪಂವಾರು ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟ

12 Dwd 3
Published on

ಧಾರವಾಡ: ತಾಲೂಕಿನ 35 ಗ್ರಾ.ಪಂ.ಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ನಗರದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ನೂತನ ಸದಸ್ಯರ ಸಮ್ಮುಖದಲ್ಲಿ ಮಂಗಳವಾರ ನಿಗದಿ ಮಾಡಲಾಯಿತು.

ಸ್ವತಃ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಭೆ ಜರುಗಿಸಿದರು. 1993ರಿಂದ 2020ರವರೆಗಿನ ಮೀಸಲಾತಿ ಪರಿಶೀಲಿಸಿ

ಎನ್​ಐಸಿ (ನ್ಯಾಷನಲ್ ಇನ್​ಫಾರ್ವೆಟಿಕ್ಸ್ ಸೆಂಟರ್) ಯಲ್ಲಿ ಅಳವಡಿಸಲಾಗಿತ್ತು. ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಪುನರಾವರ್ತನೆಯಾಗದಂತೆ ಪ್ರಕಟಿಸಲಾಯಿತು. ಆರಂಭದಲ್ಲಿ ಅಧ್ಯಕ್ಷರ, ನಂತರ ಉಪಾಧ್ಯಕ್ಷರ ಮೀಸಲಾತಿ ಘೋಷಿಸಲಾಯಿತು.

ತಾಲೂಕಿನ 35ರ ಪೈಕಿ 3 ಪಂಚಾಯಿತಿಗಳ ಅಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿ (ಎಸ್​ಸಿ) ಮೀಸಲಾತಿ ಪ್ರಕಟಿಸಬೇಕಾಗಿತ್ತು. ಹಿಂದಿನ ಮೀಸಲಾತಿ ಪರಿಗಣಿಸಿದಾಗ 7 ಪಂಚಾಯಿತಿಗಳು ಎಸ್​ಸಿ ಮೀಸಲಾತಿಗೆ ಅರ್ಹವಾಗಿದ್ದವು. ಈ 7 ಪಂಚಾಯಿತಿಗಳಾದ ಮಾರಡಗಿ, ಮರೇವಾಡ, ಕುರುಬಗಟ್ಟಿ, ಚಿಕ್ಕಮಲ್ಲಿಗವಾಡ, ಕಲಕೇರಿ, ದೇವರಹುಬ್ಬಳ್ಳಿ, ಮನಸೂರ ಪಂಚಾಯಿತಿ ಪೈಕಿ ಮೂರನ್ನು ಆರಿಸಲು ಚೀಟಿ ಹಾಕಿ ಲಾಟರಿ ಎತ್ತಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಬೇರೆ ಪಂಚಾಯಿತಿಗಳ ನೂತನ ಸದಸ್ಯರು ಲಾಟರಿ ಎತ್ತಿದಾಗ ದೇವರಹುಬ್ಬಳ್ಳಿ, ಮಾರಡಗಿಗೆ ಎಸ್​ಸಿ (ಮಹಿಳೆ) ಹಾಗೂ ಚಿಕ್ಕಮಲ್ಲಿಗವಾಡಕ್ಕೆ ಎಸ್​ಸಿ ಮೀಸಲಾತಿ ಬಂತು.

ಇದೇ ರೀತಿ 2 ಪಂಚಾಯಿತಿಗಳಿಗೆ ಅನುಸೂಚಿತ ವರ್ಗ (ಎಸ್​ಟಿ) ಮೀಸಲಾತಿ ನಿಗದಿಪಡಿಸಲು 18 ಪಂಚಾಯಿತಿಗಳು ಅರ್ಹವಾಗಿದ್ದವು. ಇಲ್ಲಿಯೂ ಲಾಟರಿ ಎತ್ತಿದಾಗ ಕೋಟೂರ ಎಸ್​ಟಿ (ಮಹಿಳೆ), ಹಾರೋಬೆಳವಡಿಗೆ ಎಸ್​ಟಿ ಮೀಸಲಾತಿ ಬಂದಿತು.

ಜಿ.ಪಂ. ಸಿಇಒ ಡಾ. ಬಿ. ಸುಶೀಲಾ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ತಹಸೀಲ್ದಾರ್ ಡಾ. ಸಂತೋಷಕುಮಾರ ಬಿರಾದಾರ, ತಾ.ಪಂ. ಇಒ ಎಸ್.ಎಸ್. ಕಾದ್ರೊಳ್ಳಿ ಇತರರಿದ್ದರು.

ಮನಗುಂಡಿ: ಅ ವರ್ಗ (ಅಧ್ಯಕ್ಷ); ಸಾಮಾನ್ಯ ಮಹಿಳೆ (ಉಪಾಧ್ಯಕ್ಷ).

ಮನಸೂರ: ಅ ವರ್ಗ ಎಸ್​ಟಿ ಮಹಿಳೆ.

ಮಂಡಿಹಾಳ: ಅ ವರ್ಗ; ಸಾ. ಮಹಿಳೆ.

ತೇಗೂರ: ಅ ವರ್ಗ; ಸಾ. ಮಹಿಳೆ.

ಮುಮ್ಮಿಗಟ್ಟಿ: ಅ ವರ್ಗ; ಎಸ್​ಸಿ ಮಹಿಳೆ.

ಮಾದನಭಾವಿ: ಅ ವರ್ಗ; ಮಹಿಳೆ-ಬ ವರ್ಗ ಮಹಿಳೆ.

ತಡಕೋಡ: ಅ ವರ್ಗ ಮಹಿಳೆ; ಸಾಮಾನ್ಯ.

ನರೇಂದ್ರ: ಅ ವರ್ಗ ಮಹಿಳೆ; ಸಾಮಾನ್ಯ.

ಮರೇವಾಡ: ಅ ವರ್ಗ ಮಹಿಳೆ; ಸಾಮಾನ್ಯ ಮಹಿಳೆ.

ಕನಕೂರ: ಅ ವರ್ಗ ಮಹಿಳೆ; ಸಾಮಾನ್ಯ.

ಕ್ಯಾರಕೊಪ್ಪ: ಬ ವರ್ಗ; ಸಾಮಾನ್ಯ ಮಹಿಳೆ.

ಕುರುಬಗಟ್ಟಿ: ಬ ವರ್ಗ ಮಹಿಳೆ; ಸಾಮಾನ್ಯ.

ಯರಿಕೊಪ್ಪ: ಸಾಮಾನ್ಯ; ಅ ವರ್ಗ ಮಹಿಳೆ.

ನಿಗದಿ: ಸಾಮಾನ್ಯ; ಸಾಮಾನ್ಯ ಮಹಿಳೆ.

ಕಲಕೇರಿ: ಸಾಮಾನ್ಯ; ಸಾಮಾನ್ಯ ಮಹಿಳೆ.

ರಾಮಾಪುರ: ಸಾಮಾನ್ಯ; ಎಸ್​ಸಿ ಮಹಿಳೆ.

ಹಂಗರಕಿ: ಸಾಮಾನ್ಯ; ಅ ವರ್ಗ ಮಹಿಳೆ.

ಕೊಟಬಾಗಿ: ಸಾಮಾನ್ಯ; ಅ ವರ್ಗ ಮಹಿಳೆ.

ಪುಡಕಲಕಟ್ಟಿ: ಸಾಮಾನ್ಯ; ಸಾ. ಮಹಿಳೆ.

ಅಮ್ಮಿನಭಾವಿ: ಸಾಮಾನ್ಯ; ಅ ವರ್ಗ ಮಹಿಳೆ.

ಶಿವಳ್ಳಿ: ಸಾಮಾನ್ಯ; ಸಾಮಾನ್ಯ ಮಹಿಳೆ.

ಮುಗದ: ಸಾಮಾನ್ಯ. ಮಹಿಳೆ; ಸಾಮಾನ್ಯ.

ಹಳ್ಳಿಗೇರಿ: ಸಾಮಾನ್ಯ ಮಹಿಳೆ; ಸಾಮಾನ್ಯ.

ಬೇಲೂರ: ಸಾ. ಮಹಿಳೆ; ಸಾಮಾನ್ಯ.

ಯಾದವಾಡ: ಸಾ. ಮಹಿಳೆ; ಅ ವರ್ಗ.

ಗರಗ: ಸಾಮಾನ್ಯ ಮಹಿಳೆ; ಎಸ್​ಟಿ.

ಲೋಕೂರ: ಸಾಮಾನ್ಯ ಮಹಿಳೆ; ಅ ವರ್ಗ ಮಹಿಳೆ.

ಉಪ್ಪಿನಬೆಟಗೇರಿ: ಸಾ. ಮಹಿಳೆ; ಅ ವರ್ಗ.

ಕರಡಿಗುಡ್ಡ: ಸಾಮಾನ್ಯ; ಎಸ್​ಸಿ.

ಹೆಬ್ಬಳ್ಳಿ: ಸಾಮಾನ್ಯ ಮಹಿಳೆ; ಅ ವರ್ಗ.

ಚಿಕ್ಕಮಲ್ಲಿಗವಾಡ: ಎಸ್​ಸಿ; ಅ ವರ್ಗ ಮಹಿಳೆ.

ದೇವರಹುಬ್ಬಳ್ಳಿ: ಎಸ್​ಸಿ ಮಹಿಳೆ; ಸಾಮಾನ್ಯ.

ಮಾರಡಗಿ: ಎಸ್​ಸಿ ಮಹಿಳೆ; ಸಾಮಾನ್ಯ.

ಹಾರೋಬೆಳವಡಿ: ಎಸ್​ಟಿ; ಅ ವರ್ಗ.

ಕೋಟೂರ: ಎಸ್​ಟಿ ಮಹಿಳೆ; ಬ ವರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net